ಪುತ್ತೂರು: ಕೇರಳ ರಾಜ್ಯಕ್ಕೆ 15 ವರ್ಷಗಳ ಹಿಂದೆ
ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಶ್ರೀಗಂಧ ಎಣ್ಣೆಯ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ತಲೆಮರೆಸಿಕೊಂಡು ಬಳಿಕ ಬಂಧಿತರಾಗಿರುವ ಆರೋಪಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಹಮ್ಮದ್ ರಫೀಕ್ ಎಮ್.ಎಮ್ ಈತ ಕಾಸರಗೋಡು ಜಿಲ್ಲೆಯ ಕೊಲ್ಲಂಬಾಡಿ ತಾಯಲ್ ನಿವಾಸಿ ಅವರು ಬಂಧಿತ ಆರೋಪಿ. 2006 ರಲ್ಲಿ ನಾಲ್ವರು ಆರೋಪಿಗಳು ಕಾರಲ್ಲಿ 2 ಲೀಟರ್ ಶ್ರೀಗಂಧದ ಎಣ್ಣೆಯನ್ನು ಕೇರಳ ರಾಜ್ಯಕ್ಕೆ ಅಕ್ರಮವಾ ಸಾಗಾಟ ಮಾಡುತ್ತಿದ್ದ ವೇಳೆ ಕುಂಜೂರುಪಂಜ ಸಮೀಪ ಸಂಪ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ನಾಲ್ವರು ಆರೋಪಿಗಳಲ್ಲಿ ನ್ಯಾಯಾಲದಲ್ಲಿ ವಿಚಾರಣೆಗೆ ಮೂರು ಮಂದಿ ಮಾತ್ರ ಹಾಜರಾಗುತ್ತಿದ್ದರು , ಓರ್ವ ಆರೋಪಿ ಮಹಮ್ಮದ್ ರಫೀಕ್ ಎಮ್.ಎಮ್ ಅವರು ತಲೆಮರೆಸಿಕೊಂಡಿದ್ದ. ಆರೋಪಿಯ ಪತ್ತೆಗೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು . ಆರೋಪಿ ಮಹಮ್ಮದ್ ರಫೀಕ್ ಎಮ್ ಎಮ್ ಅವರನ್ನು ಕೇರಳದ ಕಣ್ಣೂರಿನಲ್ಲಿ ಪೊಲಿಸರು ಬಂಧಿಸಿದ್ದರು . ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು , ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು .
ಇದೀಗ ನ್ಯಾಯಾಲಯ ವಿಚಾರಣೆ ನಡೆಸಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ . ಆರೋಪಿ ಪರ ವಕೀಲರಾದ ಮಾಧವ ಪೂಜಾರಿ ಮತ್ತು ರಾಕೇಶ್ ಬಲ್ನಾಡು ವಾದಿಸಿದರು.


