Friday, June 5, 2026
Homeಕರಾವಳಿವಿಟ್ಲ: ಆಟೋ ಚಾಲಕನ ಮೇಲೆ ತಲವಾರಿನಿಂದ ದಾಳಿ ನಡೆಸಿದ ಪ್ರಕರಣ: ಮೂವರ ವಿರುದ್ಧ ಕೇಸ್‌ ದಾಖಲು

ವಿಟ್ಲ: ಆಟೋ ಚಾಲಕನ ಮೇಲೆ ತಲವಾರಿನಿಂದ ದಾಳಿ ನಡೆಸಿದ ಪ್ರಕರಣ: ಮೂವರ ವಿರುದ್ಧ ಕೇಸ್‌ ದಾಖಲು

- Advertisement -
- Advertisement -

ವಿಟ್ಲ: ಆಟೋ ಚಾಲಕನ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನ ನಡೆಸಿದ ಪ್ರಕರಣ ಸಂಬಂಧ ಮೂವರ ವಿರುದ್ಧ ಕೇಸ್ ದಾಖಲಾಗಿದೆ.

ಬೋಳಂತೂರು ಸಮೀಪದ ಗುಳಿ ನಿವಾಸಿ ಶಾಕೀರ್ (30) ಹಲ್ಲೆಗೊಳಗಾದ ಆಟೋ ಚಾಲಕ. ಶಾಕೀರ್ ಕಬಡ್ಡಿ ಮ್ಯಾಚ್ ಮುಗಿಸಿಕೊಂಡು ಮನೆಗೆ ಆಟೋದಲ್ಲಿ ಹಿಂತಿರುಗುತ್ತಿದ್ದ. ಈ ವೇಳೆ ಬೋಳಂತೂರು ಸಮೀಪದ ನಾಡಾಜೆ ರಸ್ತೆಯಲ್ಲಿ ಆಟೋವನ್ನು ತಡೆದು ನಿಲ್ಲಿಸಿ ನಾಲ್ವರ ತಂಡ ತಲವಾರಿನಿಂದ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿತ್ತು. ಇದೀಗ ಪ್ರಕರಣ ಸಂಬಂಧಸಿ ಸಾದಿಕ್ ಎಂಬಾತ ಸೇರಿದಂತೆ ಸೇರಿ ಇನ್ನಿಬ್ಬರ ಮೇಲೂ ಕೇಸ್ ದಾಖಲಾಗಿದೆ. ಹಳೇ ವೈಷಮ್ಯದ ಹಿನ್ನೆಲೆ ಘಟನೆ ನಡೆದಿದೆ ಎನ್ನಲಾಗಿದೆ.

- Advertisement -

Latest News

error: Content is protected !!