Monday, May 6, 2024
Homeಕರಾವಳಿಬೆಳ್ತಂಗಡಿ: ನಟಿ ಶೃತಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ: ಸಿರಿ ಸಿಬ್ಬಂದಿಯಿಂದ ಗೌರವಾರ್ಪಣೆ

ಬೆಳ್ತಂಗಡಿ: ನಟಿ ಶೃತಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ: ಸಿರಿ ಸಿಬ್ಬಂದಿಯಿಂದ ಗೌರವಾರ್ಪಣೆ

spot_img
- Advertisement -
- Advertisement -

ಬೆಳ್ತಂಗಡಿ: ಚತುರ್ಭಾಷಾ ಚಲನಚಿತ್ರ ನಟಿ ಶ್ರೀಮತಿ ಶೃತಿಯವರು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪ್ರಧಾನ ಕಛೇರಿ ಉಜಿರೆಗೆ ಇಂದು(ನವೆಂಬರ್ 15) ರಂದು ಭೇಟಿ ನೀಡಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಎಸ್ ಜನಾರ್ಧನರವರು ಚಿತ್ರನಟಿ ಶೃತಿಯವರನ್ನು ಸ್ವಾಗತಿಸಿ, ಸಿರಿಸಂಸ್ಥೆಯ ಕಿರು ಪರಿಚಯವನ್ನು ಮಾಡಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.

ಶ್ರೀಮತಿ ಶೃತಿಯವರು ಸನ್ಮಾನ ಸ್ವೀಕರಿಸಿ ಮಾತನಾಡಿ ಪೂಜ್ಯ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸಾಗಿರುವ ಈ ಸಿರಿ ಸಂಸ್ಥೆಯು ಇಲ್ಲಿ ದುಡಿಯುತ್ತಿರುವ ಪ್ರತಿಯೋರ್ವ ಮಹಿಳೆಗೂ ಸ್ವಾವಲಂಬನೆಯ ಬದುಕನ್ನು ನೀಡಿ, ಸುಖೀ ಜೀವನವನ್ನು ನಡೆಸಲು ಸ್ಫೂರ್ತಿಯಾಗಿದೆ. ಪ್ರತಿ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇದ್ದಾಳೆ ಎಂಬ ಗಾದೆ ಮಾತು ಇಲ್ಲಿ ಸುಳ್ಳಾಗಿದೆ. ಯಾಕೆಂದರೆ ಸಿರಿ ಸಂಸ್ಥೆಯಲ್ಲಿ ದುಡಿಯುತ್ತಾ, ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಂಡಂತಹ ಇಲ್ಲಿಯ ಎಲ್ಲಾ ಮಹಿಳೆಯರ ಹಿಂದೆ ಶಕ್ತಿಯಾಗಿ ಪೂಜ್ಯರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ನಿಂತಿದ್ದಾರೆ. ಸಿರಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಪೂಜ್ಯ ದಂಪತಿಗಳ ಆಸರೆಯಲ್ಲಿ ಸಹಸ್ರಾರು ಮಹಿಳೆಯರ ಬಾಳು ಬೆಳಕಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಿರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ರಾಜೇಶ್ ಪೈ, ‘ಕೊರಗಜ್ಜ’ ಚಲನಚಿತ್ರದ ನಿರ್ಮಾಪಕರಾದ ಶ್ರೀ ವಿಧ್ಯಾದ‌, ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ನಿರ್ದೇಶಕರಾದ ಪ್ರಸನ್ನ, ಎಸ್.ಕೆ.ಡಿ.ಆರ್.ಡಿ.ಪಿ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ಹಾಗೂ ಸಿರಿ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಶ್ರೀಮತಿ ಶೃತಿಯವರನ್ನು ಅಭಿನಂದಿಸಿ ಗೌರವಾರ್ಪಣೆ ಸಲ್ಲಿಸಿದರು. ಸಿರಿ ಸಿಬ್ಬಂದಿಗಳು ಶ್ರೀಮತಿ ಶೃತಿಯವರ ಭೇಟಿಯಿಂದ ಸಂಭ್ರಮಿಸಿದರು. ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

- Advertisement -
spot_img

Latest News

error: Content is protected !!