Thursday, June 4, 2026
Homeಕರಾವಳಿಉಡುಪಿಉಡುಪಿ: ಸೈಕಲ್‌ನಲ್ಲಿ ಶಾಲೆಗೆ ಬರ್ತಿದ್ದ ವಿದ್ಯಾರ್ಥಿಗೆ ಬೊಲೆರೋ ಟೆಂಪೋ ಡಿಕ್ಕಿ: ವಿದ್ಯಾರ್ಥಿ ಸ್ಥಿತಿ ಗಂಭೀರ

ಉಡುಪಿ: ಸೈಕಲ್‌ನಲ್ಲಿ ಶಾಲೆಗೆ ಬರ್ತಿದ್ದ ವಿದ್ಯಾರ್ಥಿಗೆ ಬೊಲೆರೋ ಟೆಂಪೋ ಡಿಕ್ಕಿ: ವಿದ್ಯಾರ್ಥಿ ಸ್ಥಿತಿ ಗಂಭೀರ

- Advertisement -
- Advertisement -

ಉಡುಪಿ: ಸೈಕಲ್‌ನಲ್ಲಿ ಶಾಲೆಗೆ ಹೊರಟಿದ್ದ ವಿದಾರ್ಥಿಗೆ ವೇಗವಾಗಿ ಬಂದ ಬೊಲೆರೋ ಟೆಂಪೋ ಡಿಕ್ಕಿಯಾದ ಘಟನೆ ಉಡುಪಿಯ ಅಂಬಲಪಾಡಿ ಜಂಕ್ಷನ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಸೈಂಟ್ ಸಿಸಿಲಿಯ ಹೈಸ್ಕೂಲು ವಿದ್ಯಾರ್ಥಿ ಆದಿತ್ಯ ಪಿ. ಶೆಟ್ಟಿಗಾರ್ ತೀವ್ರವಾಗಿ ಗಾಯಗೊಂಡಿದ್ದಾನೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಆಪತ್ಕಾಂಧವ ವಿಶು ಶೆಟ್ಟಿ ಅವರು ಸಾರ್ವಜನಿಕರ ನೆರವಿನಿಂದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭಿಸಿದೆ.

ಟೆಂಪೋ ಚಾಲಕನ ಅತೀ ವೇಗದ ಚಾಲನೆಯೇ ದುರ್ಘಟನೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!