Sunday, April 28, 2024
Homeಕರಾವಳಿಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ  ಭಜರಂಗದಳ ಕಾರ್ಯಕರ್ತರು

ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ  ಭಜರಂಗದಳ ಕಾರ್ಯಕರ್ತರು

spot_img
- Advertisement -
- Advertisement -

ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಭಜರಂಗದಳ ಕಾರ್ಯಕರ್ತರು ತಡೆದ ಘಟನೆ ಕುತ್ತಾರು ಸಮೀಪದ ಭಂಡಾರಬೈಲು ಎಂಬಲ್ಲಿ ನಡೆದಿದೆ.

ಕೇರಳ ನೋಂದಣಿಯ ಏಸ್ ವಾಹನವು ಮುಡಿಪು, ಕೊಣಾಜೆ, ಮದಕ ಮಾರ್ಗವಾಗಿ 5 ಜಾನುವಾರುಗಳನ್ನು ಅಕ್ರಮವಾಗಿ ತುಂಬಿಸಿ ಸಾಗುತ್ತಿದ್ದ ವೇಳೆ ಭಂಡಾರ ಬೈಲು ರಸ್ತೆಯ ಕಡಿದಾದ ಎತ್ತರದ ತಿರುವು ಏರಲಾರದೆ ನಿಂತು ಬಿಟ್ಟಿತ್ತು. ಈ ವೇಳೆ ಸ್ಥಳದಲ್ಲಿದ್ದ ಭಜರಂಗದಳದ ಕಾರ್ಯಕರ್ತರು ವಾಹನವನ್ನು ತಳ್ಳಿ ಚಾಲಕನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ವಾಹನದ ಹಿಂದೆ ಮೀನಿನ ಪ್ಲಾಸ್ಟಿಕ್ ಟ್ರೇಗಳನ್ನು ರಾಶಿ ಹಾಕಲಾಗಿತ್ತು. ಅದರೊಳಗೆ ಸದ್ದು ಕೇಳಿಸಿದಾಗ ಒಳಗಡೆ 5 ಜಾನುವಾರುಗಳನ್ನು ಉಸಿರುಗಟ್ಟಿಸಿ ಕಟ್ಟಿ ಹಾಕಿರುವುದನ್ನು ಸಹಾಯಕ್ಕೆ ಬಂದವರು ಕಂಡಿದ್ದಾರೆ. ತಕ್ಷಣ ವಾಹನದಲ್ಲಿದ್ದ ಚಾಲಕ ಸೇರಿ ಇಬ್ಬರು ಪರಾರಿಯಾಗಿದ್ದು, ಎಸ್ಕಾರ್ಟ್ ನೀಡುತ್ತಿದ್ದ ಇಬ್ಬರು ಬೈಕುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ವಾಹನದಲ್ಲಿದ್ದ ಒಂದು ಕರು ತಪ್ಪಿಸಿದ್ದು, ಮತ್ತೊಂದು ಕರು, ಎರಡು ಹೋರಿ, ಒಂದು ಹಸುವನ್ನು ರಕ್ಷಿಸಿ ಉಳ್ಳಾಲ ಠಾಣೆಗೆ ಒಪ್ಪಿಸಿದ್ದಾರೆ.

- Advertisement -
spot_img

Latest News

error: Content is protected !!