Monday, June 8, 2026
Homeತಾಜಾ ಸುದ್ದಿಲೋಕಾಯುಕ್ತರ ಸೋಗಿನಲ್ಲಿ ಬಂದ ವ್ಯಕ್ತಿಯಿಂದ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ವಿಚಾರಣೆ: ಐಡಿ ಕೇಳಿದಾಗ ಸ್ಥಳದಿಂದ ಕಾಲ್ಕಿತ್ತ...

ಲೋಕಾಯುಕ್ತರ ಸೋಗಿನಲ್ಲಿ ಬಂದ ವ್ಯಕ್ತಿಯಿಂದ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ವಿಚಾರಣೆ: ಐಡಿ ಕೇಳಿದಾಗ ಸ್ಥಳದಿಂದ ಕಾಲ್ಕಿತ್ತ ನಕಲಿ ಅಧಿಕಾರಿ

- Advertisement -
- Advertisement -

ಚಿಕ್ಕಬಳ್ಳಾಪುರ: ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ತಾಲ್ಲೂಕು ಕಚೇರಿಗೆ ದಾಳಿ ನಡೆಸಿದ ವ್ಯಕ್ತಿಯೊಬ್ಬ ತಹಶೀಲ್ದಾರ್ ಅವರನ್ನೇ ವಿಚಾರಣೆಗೊಳಪಡಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು ತಹಸೀಲ್ದಾರ್ ಪೊಲೀಸ್ ದೂರು ನೀಡಿದ್ದಾರೆ.

ಬೆಳ್ತಂಗಡಿಯಲ್ಲಿ ತಹಶೀಲ್ದಾರ್‌ ಆಗಿ ಕಾರ್ಯ ನಿರ್ವಹಿಸಿ ಜನಪ್ರಿಯರಾಗಿದ್ದ, ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ದೂರು ನೀಡಿದವರು. ತಾಲೂಕು ಕಚೇರಿಗೆ ಟಿಪ್‌ ಟಾಪ್‌ ಆಗಿ ಬಂದ ವ್ಯಕ್ತಿಯೊಬ್ಬ ಧಿಮಾಕಿನ ಶೈಲಿಯಲ್ಲಿ ತಹಶೀಲ್ದಾರನ್ನು ವಿಚಾರಣೆ ನಡೆಸಿದ್ದು ಲೋಕಾಯುಕ್ತರ ರೀತಿ ಪೋಸು ನೀಡಿದ್ದ. ಆದರೆ ವ್ಯಕ್ತಿಯ ಚಲನವಲನದಿಂದ ಅನುಮಾನಗೊಂಡ ಚಿಕ್ಕಬಳ್ಳಾಪುರ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಲೋಕಾಯುಕ್ತ ಅಧಿಕಾರಿ ಎನ್ನುವ ಬಗ್ಗೆ ಐಡಿ ತೋರಿಸುವಂತೆ ಹೇಳಿದ್ದಾರೆ. ದಾಖಲೆ ಕೇಳುತ್ತಿದ್ದಂತೆ ನಕಲಿ ಅಧಿಕಾರಿ ಹೊರಗೆ ಓಡಿದ್ದು ತಪ್ಪಿಸಿಕೊಂಡಿದ್ದಾನೆ. ತಹಶೀಲ್ದಾರ್ ಗಣಪತಿ ಶಾಸ್ತ್ರಿ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಅಧಿಕಾರಿಯನ್ನು ಬೆದರಿಸಿ ಹಣ ಕೀಳಬಹುದೆಂದು ಬಂದಿದ್ದ ವ್ಯಕ್ತಿಯೇ ಕೊನೆಗೆ ಪೇಚಿಗೆ ಸಿಲುಕಿದ್ದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ತಹಶೀಲ್ದಾರ್ ಗಣಪತಿಶಾಸ್ತ್ರಿ ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!