Saturday, June 6, 2026
Homeಕರಾವಳಿಪುತ್ತೂರು; ಈಶ್ವರಮಂಗಲದಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಂದ ಪ್ರಯಾಣಿಕನನ್ನು ಕಾಲಿನಿಂದ ಒದ್ದು ಹೊರ ಹಾಕಿದ...

ಪುತ್ತೂರು; ಈಶ್ವರಮಂಗಲದಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಂದ ಪ್ರಯಾಣಿಕನನ್ನು ಕಾಲಿನಿಂದ ಒದ್ದು ಹೊರ ಹಾಕಿದ ಕಂಡಕ್ಟರ್; ನಿರ್ವಾಹಕನ ಅಮಾನತಿಗೆ ಸಾರ್ವಜನಿಕರ ಆಗ್ರಹ

- Advertisement -
- Advertisement -

ಪುತ್ತೂರು: ಕುಡಿದು ಬಸ್ ಹತ್ತಿದ ಎಂಬ ಕಾರಣಕ್ಕೆ ಪ್ರಯಾಣಿಕನೊಬ್ಬನನ್ನು ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕನ ಕಾಲಿನಿಂದ ಒದ್ದು ಹೊರಕ್ಕೆ ತಳ್ಳಿದ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದ ಪೇಟೆಯ ಜಂಕ್ಷನ್ ನಲ್ಲಿ ನಡೆದಿದೆ.

ಕೆಎ 21 ಎಫ್ 0002 ನಂಬರ್‌ನ ಬಸ್ ನಿರ್ವಾಹಕ ಪ್ರಯಾಣಿಕನಿಗೆ ಕಾಲಿನಿಂದ ಒದ್ದು ಹೊರಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಯಾಣಿಕ ಬಸ್ ಹತ್ತುವಾಗಲೇ ನಿರ್ವಾಹಕ ಪ್ರಯಾಣಿಕನನ್ನು ತಡೆದು ಆತನ ಕೊಡೆಯನ್ನು ರಸ್ತೆಗೆ ಎಸೆಯುತ್ತಾರೆ. ಬಳಿಕ ಕೈಯಿಂದ ಹಲ್ಲೆ ನಡೆಸುವುದಲ್ಲದೆ ಕೊನೆಗೆ ಕಾಲಿನಿಂದ ಪ್ರಯಾಣಿಕನ ಎದೆಗೆ ತುಳಿದು ರಸ್ತೆಗೆ ದೂಡಿ ಹಾಕಿ, ಆತನಿಗೆ ಜೋರು ಮಾಡುತ್ತಾರೆ. ರಸ್ತೆಗೆ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ನೇರವಾಗಿ ಬಸ್ ಮುಂದಕ್ಕೆ ಹೋಗುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಇನ್ನು ಬಸ್ಸಿನಲ್ಲಿರುವ ವ್ಯಕ್ತಿ ಯಾವುದೇ ಸ್ಥಿತಿಯಲ್ಲಿದ್ದರೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ನಿರ್ವಾಹಕರಿಗಿಲ್ಲ. ಮೇಲ್ನೋಟಕ್ಕೆ ನಿರ್ವಾಹಕನ ವರ್ತನೆಯಲ್ಲಿ ತಪ್ಪು ಎಂದು ಕಾಣುತ್ತಿದೆ. ಹೀಗಾಗಿ ಈತನ ವಿರುದ್ಧ ಕಠಿಣ ಕ್ರಮಕೈಗೊಂಡು ಅಮಾನತು ಮಾಡಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಇನ್ನು ಸಾರ್ವಜನಿಕರು ಕೂಡ ನಿರ್ವಾಹಕನ ಅಮಾನತಿಗೆ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!