Saturday, June 13, 2026
Homeಕರಾವಳಿಕಡಬ; ಮರದ ರೆಂಬೆ ಕಡಿಯುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

ಕಡಬ; ಮರದ ರೆಂಬೆ ಕಡಿಯುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

- Advertisement -
- Advertisement -

ಕಡಬ; ಮರದ ರೆಂಬೆ ಕಡಿಯುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಅನಡ್ಕ ಎಂಬಲ್ಲಿ ನಡೆದಿದೆ.

 ಕುಂತೂರಿನ ಅನಡ್ಕ ಕಾಲಾಯಿಲ್ ನಿವಾಸಿ ಮನೋಜ್‌(42 ವ) ಮೃತ ದುರ್ದೈವಿ. ಮನೋಜ್ ಅವರು ಮರದ ರೆಂಬೆ ಕಡಿಯುವಾಗ 33 ಕೆವಿ ವಿದ್ಯುತ್ ತಂತಿ ತಾಗಿ ಘಟನೆ ಸಂಭವಿಸಿದೆ. ಘಟನೆ ನಡೆದ ವೇಳೆ ಮನೋಜ್ ಅವರ ಮೃತದೇಹ ಮರದಲ್ಲಿ ನೇತಾಡುತ್ತಿತ್ತು. ಬಳಿಕ ಕಡಬ ಮೆಸ್ಕಾಂ ಎಇಇ ಸಜಿಕುಮಾರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತದೇಹವನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!