Saturday, June 6, 2026
Homeತಾಜಾ ಸುದ್ದಿನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಕೇಂದ್ರ ಮಳೆ ಹಾನಿ ತಂಡ ಅಧ್ಯಯನ ಪ್ರವಾಸ

ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಕೇಂದ್ರ ಮಳೆ ಹಾನಿ ತಂಡ ಅಧ್ಯಯನ ಪ್ರವಾಸ

- Advertisement -
- Advertisement -

ಬೆಂಗಳೂರು: ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಕೇಂದ್ರ ಮಳೆ ಹಾನಿ ತಂಡ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮಳೆ ಹಾನಿ ಹಿನ್ನೆಲೆಯಲ್ಲಿ ಮಳೆ ಹಾನಿ ಪರಿಶೀಲನೆ ನಡೆಸಲು ಕೇಂದ್ರದಿಂದ ಅಧ್ಯಯನ ತಂಡಗಳು ರಾಜ್ಯಕ್ಕೆ ಆಗಮಿಸಲಿವೆ.

ಮೂರು ಅಧ್ಯಯನ ತಂಡಗಳು ಸಪ್ಟೆಂಬರ್ 7 ರಿಂದ 9 ರ ವರೆಗೆ ಮಳೆ ಹಾನಿ ಪ್ರದೇಶಗಳಲ್ಲಿ ವೀಕ್ಷಣೆ ನಡೆಸಲಿವೆ. ಸೆಪ್ಟೆಂಬರ್ 7 ರಂದು ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಕೇಂದ್ರ ಅಧ್ಯಯನ ತಂಡಗಳು ಸಿಎಂ ಜೊತೆ ಸಭೆ ನಡೆಸಿ ನಂತರ ಹಾನಿ ಪ್ರದೇಶಗಳಿಗೆ ತೆರಳಲಿವೆ.

ಆಶೀಶ್ ಕುಮಾರ್, ಅಶೋಕ್ ಕುಮಾರ್ ಮತ್ತು ಡಾ‌‌ ಕೆ. ಮನೋಹರನ್ ನೇತೃತ್ವದ ತಂಡಗಳು ರಾಜ್ಯದಲ್ಲಿ ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿವೆ. ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಆಶೀಶ್ ಕುಮಾರ್ ನೇತೃತ್ವದ ತಂಡ ಪ್ರವಾಸ ನಡೆಸಲಿದೆ.

ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಅಶೋಕ್ ಕುಮಾರ್ ನೇತೃತ್ವದ ತಂಡ ಪ್ರವಾಸ ಕೈಗೊಳ್ಳಲಿದೆ. ಬೀದರ್, ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಡಾ. ಮನೋಹರನ್ ನೇತೃತ್ವದ ತಂಡದಿಂದ ಅಧ್ಯಯನ ಪ್ರವಾಸ ನಡೆಯಲಿದೆ.

- Advertisement -

Latest News

error: Content is protected !!