Wednesday, June 24, 2026
Homeಕರಾವಳಿಉಡುಪಿಉಡುಪಿ: ಬೀದಿ ನಾಯಿ ಹಾವಳಿ ತಪ್ಪಿಸಿ, ಸಾರ್ವಜನಿಕರನ್ನು ರಕ್ಷಿಸಿ: ನಗರ ಸಭೆ ಅಧಿಕಾರಿಗಳಿಗೆ ಹಿರಿಯ ನ್ಯಾಯಾಧೀಶೆ...

ಉಡುಪಿ: ಬೀದಿ ನಾಯಿ ಹಾವಳಿ ತಪ್ಪಿಸಿ, ಸಾರ್ವಜನಿಕರನ್ನು ರಕ್ಷಿಸಿ: ನಗರ ಸಭೆ ಅಧಿಕಾರಿಗಳಿಗೆ ಹಿರಿಯ ನ್ಯಾಯಾಧೀಶೆ ಮನವಿ

- Advertisement -
- Advertisement -

ಉಡುಪಿ: ಪುಟ್ಟ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು ಬಾಲಕಿ ಅಜ್ಜರ ಕಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಸಮಸ್ಯೆಯ ಗಂಭೀರತೆ ಅರಿತ ಹಿರಿಯ ನ್ಯಾಯಾಧೀಶರೊಬ್ಬರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ.‌

ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶೆ ಶರ್ಮಿಳ.ಎಸ್ ಈ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ನಗರಸಭೆ ಮತ್ತು ಪ್ರಾಣಿ ದಯಾ ಸಂಘದವರು ಸೂಕ್ತ ಕ್ರಮ ಜರುಗಿಸಬೇಕು ಎಂದು ನ್ಯಾಯಾಧೀಶೆ ಗಮನ ಸೆಳೆದಿದ್ದಾರೆ. ಬೀದಿ ನಾಯಿಗಳಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಿ, ಅಲ್ಲಿ ಬೀದಿನಾಯಿಗಳನ್ನು ದಾಖಲಿಸಿ. ಬೀದಿ ನಾಯಿ ಹಾವಳಿ ತಪ್ಪಿಸಿ ಸಾರ್ವಜನಿಕರನ್ನು ರಕ್ಷಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

- Advertisement -

Latest News

error: Content is protected !!