Wednesday, June 24, 2026
Homeತಾಜಾ ಸುದ್ದಿಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ಹೆಡೆ ಎತ್ತಿದ ನಾಗರ ಹಾವು!

ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ಹೆಡೆ ಎತ್ತಿದ ನಾಗರ ಹಾವು!

- Advertisement -
- Advertisement -

ಕಲಬುರಗಿ: ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತ ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.

ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನ‌ ಈ ಘಟನೆ ನಡೆದಿದೆ.

ಮಲ್ಲಾಬಾದ್ ಗ್ರಾಮದ ಭಾಗಮ್ಮ ಬಡದಾಳ್ ಎಂಬ ಮಹಿಳೆ ತಮ್ಮ ಜಮೀನಿನಲ್ಲಿ ಮಲಗಿದ್ದರು.ಈ ಬೇಳೆ ಭಾಗಮ್ಮ ಮೈ ಮೇಲೆ ನಾಗರ ಹಾವು ಹೆಡೆ ಎತ್ತಿ ಕುಳಿತಿದೆ.

ಹಾವನ್ನು ನೋಡಿ ಗಾಬರಿಗೊಂಡ ಭಾಗಮ್ಮ ದೇವರನ್ನು ಪ್ರಾರ್ಥಿಸಿದ್ದು, ಕೆಲ ಹೊತ್ತಿನ ನಂತರ ಹಾವು ಭಾಗಮ್ಮ ಮೇಲಿನಿಂದ ಇಳಿದು ಹೋಗಿದೆ.

ಮಹಿಳೆ ಮೇಲೆ ನಾಗರಹಾವು ಹೆಡೆ ಎತ್ತಿದ್ದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

- Advertisement -

Latest News

error: Content is protected !!