Saturday, August 29, 2026
Homeಕರಾವಳಿಉಡುಪಿಉಡುಪಿ: ಪೆರಂಪಳ್ಳಿ - ಮಣಿಪಾಲ ರಸ್ತೆ ಅವ್ಯವಸ್ಥೆ: ಸ್ಥಳೀಯ ಯುವತಿಯಿಂದ ಶಾಸಕರ ತರಾಟೆ: ಸೋಶಿಯಲ್‌ ಮೀಡಿಯಾದಲ್ಲಿ...

ಉಡುಪಿ: ಪೆರಂಪಳ್ಳಿ – ಮಣಿಪಾಲ ರಸ್ತೆ ಅವ್ಯವಸ್ಥೆ: ಸ್ಥಳೀಯ ಯುವತಿಯಿಂದ ಶಾಸಕರ ತರಾಟೆ: ಸೋಶಿಯಲ್‌ ಮೀಡಿಯಾದಲ್ಲಿ ವೀಡಿಯೊ ವೈರಲ್

- Advertisement -
- Advertisement -

ಉಡುಪಿ: ಪೆರಂಪಳ್ಳಿ – ಮಣಿಪಾಲ ರಸ್ತೆ ಅವ್ಯವಸ್ಥೆ ಬಗ್ಗೆ ಸ್ಥಳೀಯ ಯುವತಿಯೊಬ್ಬರು ವೀಡಿಯೋ ಮಾಡಿ ಶಾಸಕ ರಘುಪತಿ ಭಟ್‌ರನ್ನು ತರಾಟೆಗೆ ತೆಗೆಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

 ವೀಡಿಯೋದಲ್ಲಿ ಮಣಿಪಾಲದ ಯುವತಿ, ನಾವು ಇಷ್ಟು ವರ್ಷಗಳಿಂದ ಟೋಲ್ ಕಟ್ಟುತ್ತಿದ್ದೇವೆ, ರಸ್ತೆ ತೆರಿಗೆ, ವಾಹನ ತೆರಿಗೆ ಕಟ್ಟುತ್ತಿದ್ದೇವೆ. ಇದು ಯಾರ ಹೊಟ್ಟೆಗೆ ಮಣ್ಣು ಹಾಕಲು. ನಾವು ಕೇಳಿದರೆ ನಾವು ರಸ್ತೆ ಮಾಡಿದ್ದೇವೆ, ಚರಂಡಿ ಮಾಡಿದ್ದೇವೆ, ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಅಂತೀರಿ. ನೀವು ಯಾವುದಾದರೂ ಕೆಲಸ ಸರಿಯಾಗಿ ಮಾಡಿದ್ದೀರಾ? ಎಂದು ಯುವತಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸದ್ಯ ಈ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

- Advertisement -

Latest News

error: Content is protected !!