Saturday, June 6, 2026
Homeತಾಜಾ ಸುದ್ದಿಮಂಗಳೂರು: ವಿದ್ಯಾರ್ಥಿಯ ಕಾಳಜಿ ಕಂಡು ಎಚ್ಚೆತ್ತ ಪಾಲಿಕೆ: ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಓಡಾಟಕ್ಕೆ ಮುಕ್ತ...

ಮಂಗಳೂರು: ವಿದ್ಯಾರ್ಥಿಯ ಕಾಳಜಿ ಕಂಡು ಎಚ್ಚೆತ್ತ ಪಾಲಿಕೆ: ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಓಡಾಟಕ್ಕೆ ಮುಕ್ತ ಅವಕಾಶ

- Advertisement -
- Advertisement -

ಮಂಗಳೂರು: ರಸ್ತೆ ಗುಂಡಿಗೆ ಕಲ್ಲು ಹೆಕ್ಕಿ ಹಾಕಿ ಹೊಂಡ ಮುಚ್ಚಿದ ವಿದ್ಯಾರ್ಥಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.  ನಗರದ ಕಂಕನಾಡಿಯ ಹೂವಿನ ಮಾರುಕಟ್ಟೆ ಬಳಿ, 7ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಅಹಮದ್ ಒಂದೊಂದೇ ಕಲ್ಲನ್ನು ಹೆಕ್ಕಿ ತಂದು ಹೊಂಡವನ್ನು ಮುಚ್ಚುವ ಪ್ರಯತ್ನ ಮಾಡಿದ್ದ‌.

ಈತನ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದಂತಾಗಿದೆ. ಈ ವೀಡಿಯೋದಿಂದ ಎಚ್ಚೆತ್ತುಕೊಂಡ ಮಂಗಳೂರು ಮಹಾನಗರ ಪಾಲಿಕೆ ಗುಂಡಿ ಮುಚ್ಚುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ.

- Advertisement -

Latest News

error: Content is protected !!