Monday, May 6, 2024
Homeತಾಜಾ ಸುದ್ದಿಕಟೀಲು ಮೇಳಗಳಿಂದ ಇನ್ಮುಂದೆ ಕಾಲಮಿತಿ ಯಕ್ಷಗಾನ: ಆಡಳಿತ ಮಂಡಳಿ ನಿರ್ಧಾರ

ಕಟೀಲು ಮೇಳಗಳಿಂದ ಇನ್ಮುಂದೆ ಕಾಲಮಿತಿ ಯಕ್ಷಗಾನ: ಆಡಳಿತ ಮಂಡಳಿ ನಿರ್ಧಾರ

spot_img
- Advertisement -
- Advertisement -

ಕಟೀಲು : ಮುಂದಿನ ತಿರುಗಾಟದಿಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ನಡೆಸಲ್ಪಡುವ ಆರೂ ಯಕ್ಷಗಾನ ಮೇಳಗಳ ಯಕ್ಷಗಾನ ಪ್ರದರ್ಶನವನ್ನು ಕಾಲಮಿತಿಗೆ ಬದಲಾಯಿಸಲು ಆಡಳಿತ ಮಂಡಳಿ ನಿರ್ಧರಿಸಿದೆ..

ಸರ್ಕಾರದಿಂದ ಈಗಾಗಲೇ ರಾತ್ರಿ ಗಂಟೆ 10.30ರಿಂದ 50 ಡೆಸಿಬಲ್‌ಗಿಂತ ಹೆಚ್ಚಿಗೆ ಧ್ವನಿವರ್ಧಕವನ್ನು ಬಳಸಬಾರದು ಎಂಬ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ದೇವರ ಎದುರು ಕಾಲಮಿತಿ ಯಕ್ಷಗಾನ ಬಗ್ಗೆ ಹೂಪ್ರಶ್ನೆ ಇಟ್ಟಾಗ ದೇವರ ಒಪ್ಪಿಗೆ ಬಂದಿದೆ.

ಹಾಗಾಗಿ ಕಾಲಮಿತಿ ಯಕ್ಷಗಾನ ಮಾಡುವ ಬಗ್ಗೆ ಇಂದು ಆಡಳಿತ ಮಂಡಳಿ ನಿರ್ಧಾರ ಮಾಡಿದ್ದು, ಸಂಜೆ 5 ಗಂಟೆಯಿಂದ ರಾತ್ರಿ 10.30ರ ತನಕ ಯಕ್ಷಗಾನ ನಡೆಸುವ ಬಗ್ಗೆ ನಿರ್ಣಯಿಸಲಾಗಿದೆ.

- Advertisement -
spot_img

Latest News

error: Content is protected !!