Saturday, June 6, 2026
Homeತಾಜಾ ಸುದ್ದಿಪ್ರವೀಣ್ ನೆಟ್ಟಾರು ಹಂತಕರಿಗೆ ಯಾವ ಮಾದರಿ ಶಿಕ್ಷೆ ಎಂದು ಗೃಹ ಇಲಾಖೆ ನಿರ್ಧರಿಸುತ್ತದೆ: ದಕ್ಷಿಣ ಕನ್ನಡ...

ಪ್ರವೀಣ್ ನೆಟ್ಟಾರು ಹಂತಕರಿಗೆ ಯಾವ ಮಾದರಿ ಶಿಕ್ಷೆ ಎಂದು ಗೃಹ ಇಲಾಖೆ ನಿರ್ಧರಿಸುತ್ತದೆ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿಕೆ

- Advertisement -
- Advertisement -

ಯಾದಗಿರಿ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹಂತಕರ ಬಂಧನ ವಿಚಾರದಲ್ಲಿ ನಮ್ಮ ಪೊಲೀಸರು ವೇಗವಾಗಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಕೊಳ್ಳುರು ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ಸುನೀಲ್ ಕುಮಾರ್, ಕೊಲೆ‌ ಮಾಡಿದ ಬಳಿಕ ಆರೋಪಿಗಳು ಕೇರಳ ರಾಜ್ಯಕ್ಕೆ ಓಡಿ ಹೋಗಿದ್ದು, ಅವರನ್ನು ಕೇರಳದಿಂದ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳಿಗೆ ಉಗ್ರವಾದ ಶಿಕ್ಷೆ ಆಗಬೇಕು ಅನ್ನುವುದು ಜನರ ಒತ್ತಾಸೆ ಆಗಿತ್ತು, ನಾನುಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.ಈ ಮಧ್ಯೆ ಶಿಕ್ಷೆ ಉತ್ತರ ಪ್ರದೇಶ ಮಾದರಿಯಲ್ಲಿ ಆಗಬೇಕೋ ಅಥವಾ ಇನ್ಯಾವುದೋ ಮಾದರಿಯಲ್ಲಿ ಆಗಬೇಕೋ ಎನ್ನುವುದು ಗೃಹ ಇಲಾಖೆ ನಿರ್ಧಾರ ಮಾಡುತ್ತದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

- Advertisement -

Latest News

error: Content is protected !!