Tuesday, October 13, 2026
Homeತಾಜಾ ಸುದ್ದಿಹೆಲಿಕಾಫ್ಟರ್ ನಿಂದ ಇಳಿಯುವ ವೇಳೆ ಕೊಂಚ ಮುಗ್ಗರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಹೆಲಿಕಾಫ್ಟರ್ ನಿಂದ ಇಳಿಯುವ ವೇಳೆ ಕೊಂಚ ಮುಗ್ಗರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

- Advertisement -
- Advertisement -

ಕೋಲಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಲಿಕಾಪ್ಟರ್ ನಿಂದ ಇಳಿಯುವಾಗ ಮುಗ್ಗರಿಸಿದ ಘಟನೆ ಕೋಲಾರದಲ್ಲಿ ಇಂದು ನಡೆದಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಾಲೂರು ತಾಲೂಕಿನ ಮಾಸ್ತಿ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಹೆಲಿಕಾಫ್ಟರ್ ನಿಂದ ಇಳಿಯುವಾಗ ಡಿ.ಕೆ. ಶಿವಕುಮಾರ್ ಕೊಂಚ ಜಾರಿದ್ದಾರೆ.ತಕ್ಷಣ ಪಕ್ಕದಲ್ಲೇ ಇದ್ದ ಅಂಗರಕ್ಷರು ಕೈ ಹಿಡಿದುಕೊಂಡಿದ್ದು ಡಿ.ಕೆ. ಶಿವಕುಮಾರ್ ಕೂಡಲೇ ಸಾವರಿಸಿಕೊಂಡಿದ್ದಾರೆ.

ಮಾಸ್ತಿ ಗ್ರಾಮದ ಬಳಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿ.ಕೆ. ಶಿವಕುಮಾರ್ ಹೆಲಿಕಾಫ್ಟರ್ ನಲ್ಲಿ ಬಂದಿದ್ದರು.

- Advertisement -

Latest News

error: Content is protected !!