Wednesday, June 3, 2026
Homeಕರಾವಳಿಮಂಗಳೂರು: ಪ್ರವೀಣ್ ಕೇಸ್ ನಲ್ಲಿ ಕೆಲ ಮಹಿಳೆಯರ ವಿಚಾರಣೆ ಮಾಡಿದ್ದೇವೆ: ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ

ಮಂಗಳೂರು: ಪ್ರವೀಣ್ ಕೇಸ್ ನಲ್ಲಿ ಕೆಲ ಮಹಿಳೆಯರ ವಿಚಾರಣೆ ಮಾಡಿದ್ದೇವೆ: ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ

- Advertisement -
- Advertisement -

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳ ಬಂಧನವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಮತ್ತೆ ‌ನಮ್ಮ ನೆರವು ಕೇಳಿದ್ರೆ ನಾವು ನೆರವು ಕೊಡ್ತೇವೆ.ಇಲ್ಲಾಂದ್ರೆ ಅವರೇ ತನಿಖೆ ಮಾಡ್ತಾರೆ, ನಾವು ಅದರಲ್ಲಿ ‌ಇರಲ್ಲ ಎಂದಿದ್ದಾರೆ.

ಪ್ರವೀಣ್ ಒಬ್ಬರೇ ಟಾರ್ಗೆಟ್ ಆಗಿದ್ರಾ ಅನ್ನೋ ಬಗ್ಗೆ ತನಿಖೆ ಮಾಡ್ತೇವೆ‌.ಜು.26 ರ ಹತ್ಯೆ ಟೀಂನಲ್ಲಿ ಯಾರಿದ್ದರು ಅನ್ನೋ ಬಗ್ಗೆ ‌ನಮಗೆ ಖಚಿತ ಗೊತ್ತಿತ್ತು. ಇನ್ನು ಫಾಜಿಲ್ ತನಿಖೆಯಲ್ಲಿ ಅಸಮಾಧಾನ ಇದ್ದರೆ ನನ್ನಲ್ಲಿ ಬಂದು ಹೇಳಲಿ ಎಂದಿದ್ದಾರೆ.ಮೂವರ ಕೇಸ್‌ನಲ್ಲೂ ತನಿಖೆ ಬಗ್ಗೆ ನಮ್ಮತ್ರ ಮಾಹಿತಿ ಪಡೆಯಲಿ.ಪ್ರವೀಣ್ ಕೇಸ್ ನಲ್ಲಿ ಕೆಲ ಮಹಿಳೆಯರ ವಿಚಾರಣೆ ಮಾಡಿದ್ದೇವೆ.ಆದರೆ ಅವರ ನೇರ ಸಂಪರ್ಕ ಇಲ್ಲದ ಕಾರಣ ಬಂಧಿಸಿಲ್ಲ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

- Advertisement -

Latest News

error: Content is protected !!