Sunday, June 7, 2026
Homeಕೊಡಗುಭಾರೀ ಮಳೆಗೆ ಹಳ್ಳದಲ್ಲಿ ತೇಲಿ ಬಂತು ಪುಟಾಣಿ ಆನೆ ಮರಿ

ಭಾರೀ ಮಳೆಗೆ ಹಳ್ಳದಲ್ಲಿ ತೇಲಿ ಬಂತು ಪುಟಾಣಿ ಆನೆ ಮರಿ

- Advertisement -
- Advertisement -

ಕೊಡಗು; ಭಾರೀ ಮಳೆಗೆ ಪುಟಾಣಿ ಆನೆ ಮರಿಯೊಂದು ಹಳ್ಳದಲ್ಲಿ ತೇಲಿ ಬಂದ ಘಟನೆ ಕೊಡಗಿನ ಮಂಚಳ್ಳಿ ಜೋಡುಮಾಡ ಎಂಬಲ್ಲಿ ನಡೆದಿದೆ. ಇಲ್ಲಿನ ರಾಜ ತಿಮ್ಮಯ್ಯ ಎಂಬವರ ತೋಟದ ಸಮೀಪದ ಹಳ್ಳದಲ್ಲಿ ಆನೆ ಮರಿ ತೇಲಿ ಬಂದಿದೆ.

ಕೂಡಲೇ ಆನೆ ಮರಿಯನ್ನು ರಕ್ಷಿಸಿದ ಸ್ಥಳೀಯರು ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ತಾಯಿಯಿಂದ ಬೇರ್ಪಟ್ಟು ಮರಿ ಹುಡುಕಾಟ ನಡೆಸುವಾಗ ಹಳ್ಳಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

- Advertisement -

Latest News

error: Content is protected !!