Sunday, June 7, 2026
Homeಕರಾವಳಿಸುಳ್ಯ: ಕನಕಮಜಲಿನಲ್ಲಿ ತಲ್ವಾರ್ ಹಿಡಿದು ಯುವಕ ಸುತ್ತಾಟ ಪ್ರಕರಣ: ಹುಚ್ಚಾಟ ಪ್ರದರ್ಶಿಸಿದವನ ವಿರುದ್ಧ ದೂರು ದಾಖಲು

ಸುಳ್ಯ: ಕನಕಮಜಲಿನಲ್ಲಿ ತಲ್ವಾರ್ ಹಿಡಿದು ಯುವಕ ಸುತ್ತಾಟ ಪ್ರಕರಣ: ಹುಚ್ಚಾಟ ಪ್ರದರ್ಶಿಸಿದವನ ವಿರುದ್ಧ ದೂರು ದಾಖಲು

- Advertisement -
- Advertisement -

ಸುಳ್ಯ: ಕನಕಮಜಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ಪ್ರದರ್ಶಿಸಿ ಆತಂಕ ಸೃಷ್ಟಿಸಿದ್ದ ಯುವಕ ಸಂದೀಪ್ ವಿರುದ್ಧ ಇದೀಗ ದೂರು ದಾಖಲಾಗಿದೆ. ಯುವಕನನ್ನು ವಶಕ್ಕೆ ಪಡೆದು ಇದೀಗ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ದಾಂಜಲಿ ಅರ್ಪಿಸಲು ಬ್ಯಾನರ್ ಅಳವಡಿಸುವ ವೇಳೆ  ಪ್ಲ್ಯಾಸ್ಟಿಕ್ ಬ್ಯಾನರ್ ಬಳಸದಂತೆ ಗ್ರಾಮ ಪಂಚಾಯತ್ ನಿಂದ ತಿಳಿಸಲಾಗಿತ್ತು, ಆದರೆ ಸಂದೀಪ್ ಮತ್ತು ಕೆಲವರು ಪ್ಲಾಸ್ಟಿಕ್ ಬ್ಯಾನರ್ ಅಳವಡಿಸಿದ್ದರು. ಇದನ್ನು ಪಂಚಾಯತ್ ನಿರ್ದೇಶನದಂತೆ ತೆರವುಗೊಳಿಸಲಾಗಿತ್ತು. ಇದರಿಂದ ಕೋಪಗೊಂಡ ಸಂದೀಪ್ ಎಂಬಾತ ತಲ್ವಾರ್ ಪ್ರದರ್ಶಿಸಿದ್ದ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.

- Advertisement -

Latest News

error: Content is protected !!