Thursday, June 4, 2026
HomeUncategorizedಮಂಗಳೂರು: ದರೋಡೆಗೆ  ಯತ್ನಿಸುತ್ತಿದ್ದ ನಾಲ್ವರ ಬಂಧನ

ಮಂಗಳೂರು: ದರೋಡೆಗೆ  ಯತ್ನಿಸುತ್ತಿದ್ದ ನಾಲ್ವರ ಬಂಧನ

- Advertisement -
- Advertisement -

ಮಂಗಳೂರು; ನಗರದಲ್ಲಿ ಹಣ ಸುಲಿಗೆ, ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ನಾಲ್ವರನ್ನು  ಬಂದರು ಪೊಲೀಸರು ಕುದ್ರೋಳಿಯಲ್ಲಿ ಬಂಧಿಸಿದ್ದಾರೆ.

ಕುದ್ರೋಳಿಯ ಅನಿಶ್ ಅಶ್ರಫ್ (24), ಮುಹಮ್ಮದ್ ಹಾರಿಸ್ (32), ಬೆಂಗರೆಯ, ಕೈಸ್ (26), ಕಾಮಿಲ್ (33) ಬಂಧಿತ ಆರೋಪಿಗಳು.

ಆರೋಪಿಗಳಿಂದ ತಲವಾರು, ಚೂರಿ, ಮೆಣಸಿನ ಹುಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇವರು ಗುಂಪು ಸೇರಿಕೊಂಡು ಮಾರಕಾಯುಧಗಳನ್ನು ಸಾರ್ವಜನಿಕರನ್ನು ಬೆದರಿಸಿ ಹಣ ಸುಲಿಗೆ, ದರೋಡೆ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು
ಬಂದ ಮಾಹಿತಿಯಂತೆ ದಾಳಿ ನಡೆಸಿ ಪೊಲೀಸರು ಬಂಧಿಸಿದ್ದಾರೆ.

ನಾಲ್ಕು ಮಂದಿಯೂ ರೌಡಿಶೀಟರ್‌ಗಳಾಗಿದ್ದು, ಇವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!