Saturday, June 13, 2026
Homeಕರಾವಳಿಉಡುಪಿಉಡುಪಿ: ಪರೋಟ ವ್ಯಾಪಾರದಲ್ಲಿ‌ ನಷ್ಟ: ವ್ಯಕ್ತಿ ಆತ್ಮಹತ್ಯೆ

ಉಡುಪಿ: ಪರೋಟ ವ್ಯಾಪಾರದಲ್ಲಿ‌ ನಷ್ಟ: ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಉಡುಪಿ: ಪರೋಟ ವ್ಯಾಪಾರದಲ್ಲಿ ನಷ್ಟವಾಗಿ ಸಾಲ ಬಾಧೆಯಿಂದ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಈಟನೆ ಉಡುಪಿಯಲ್ಲಿ ನಡೆದಿದೆ.

ಕಾರ್ಕಡ ಭಟ್ರಕಟ್ಟೆ ನಿವಾಸಿ ಸುಧಾಕರ ಪೂಜಾರಿ(43) ಮೃತ ದುರ್ದೈವಿ.

ಇವರು ಪರೋಟ ವ್ಯಾಪಾರ ಮಾಡಿಕೊಂಡಿದ್ದು, ಇದಕ್ಕೆ ದೊಡ್ಡ ಪ್ರಮಾಣದ ಬಂಡವಾಳ ಹೂಡಿದ್ದರು. ಕಳೆದ ಮೂರು ವರ್ಷಗಳಿಂದ ವ್ಯಾಪಾರ ಸರಿಯಾಗಿ ಆಗದೆ ನಷ್ಟ ಅನುಭವಿಸಿ, ಸಾಲದಿಂದ ತೊಂದರೆ ಅನುಭವಿಸುತ್ತಿದ್ದರೆನ್ನಲಾಗಿದೆ.

ಇದೇ ವಿಚಾರದಲ್ಲಿ ಮನನೊಂದ ಅವರು, ಪರೋಟ ಮಾಡುವ ಶೆಡ್‌ನ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!