Thursday, June 4, 2026
Homeತಾಜಾ ಸುದ್ದಿಅಳದಂಗಡಿ: ಕಡವೆ ಅಡ್ಡಬಂದು ದ್ವಿಚಕ್ರ ವಾಹನ ಪಲ್ಟಿ: ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲು

ಅಳದಂಗಡಿ: ಕಡವೆ ಅಡ್ಡಬಂದು ದ್ವಿಚಕ್ರ ವಾಹನ ಪಲ್ಟಿ: ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲು

- Advertisement -
- Advertisement -

ಅಳದಂಗಡಿ: ಕಡವೆ ಅಡ್ಡಬಂದು ದ್ವಿಚಕ್ರ ವಾಹನ ಪಲ್ಟಿಯಾದ ಘಟನೆ ವೇಣೂರಿನ ಅಳದಂಗಡಿ ಸಮೀಪದ ಸುರಿಮೊಗ್ರು ಎಂಬಲ್ಲಿ ಮಂಗಳವಾರ ನಡೆದಿದೆ.

ಸವಾರ ಪರಂಟ್ಯಾಲ ನಿವಾಸಿ ನಾರಾಯಣ ಪೂಜಾರಿ (49) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುರಿಮೊಗ್ರು ದೇವಸ್ಥಾನಕ್ಕೆ ತೆರಳಿ ಮನೆಗೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮುಗೇರು ಎಂಬಲ್ಲಿ ಏಕಾಏಕಿ ಕಡವೆ ರಸ್ತೆಗೆ ಅಡ್ಡಬಂದಿದೆ. ನಿಯಂತ್ರಣ ತಪ್ಪಿದ ನಾರಾಯಣ ಪೂಜಾರಿಯವರ ದ್ವಿಚಕ್ರ ವಾಹನ ಪಲ್ಟಿಯಾಗಿದ್ದು, ಎದೆ, ಕಾಲಿಗೆ ಗಾಯವಾಗಿದೆ. ತಕ್ಷಣ ಸ್ಥಳೀಯರ ಸಹಕಾರದಿಂದ ಗಾಯಾಳನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!