Monday, June 8, 2026
Homeತಾಜಾ ಸುದ್ದಿಸುಳ್ಯ: ಮನೆ ಸೇರುವ ತವಕದಲ್ಲಿ ಶ್ವಾನ: ಮನೆಯವರತ್ತ ನೋಡುವ ಮನಕಲಕುವ ದೃಶ್ಯ ವೈರಲ್‌

ಸುಳ್ಯ: ಮನೆ ಸೇರುವ ತವಕದಲ್ಲಿ ಶ್ವಾನ: ಮನೆಯವರತ್ತ ನೋಡುವ ಮನಕಲಕುವ ದೃಶ್ಯ ವೈರಲ್‌

- Advertisement -
- Advertisement -

ಸುಳ್ಯ: ಭಾರೀ ಮಳೆಯಿಂದ ಕೊಚ್ಚಿ ಹೋಗಿರುವ ಮರದ ಸೇತುವೆ ಮೇಲೆ ಶ್ವಾನವೊಂದು ತನ್ನ ಮನೆಯವರತ್ತ ನೋಡುತ್ತಿರುವ ಮನಕಲಕುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ವ್ಯಾಪ್ತಿಯ ಉಪ್ಪುಕಳ ಎಂಬಲ್ಲಿ ಮರದ ಪಾಲ ಭಾರೀ ಮಳೆಗೆ ಕೊಚ್ಚಿ ಹೋಗಿ 12 ಮನೆಗಳ ಸಂಪರ್ಕ ಕಡಿತಗೊಂಡಿದೆ. ಆ ಭಾಗದ ನಾಯಿಯೊಂದು ಮುರಿದಿರುವ ಮರದ ಪಾಲದ ಮೇಲೆ ಕುಳಿತುಕೊಂಡು ಆ ಭಾಗದಲ್ಲಿರುವ ತನ್ನವರ ಕಡೆಗೆ ನೋಡುತ್ತಿರುವ ಫೋಟೋ ವೈರಲ್ ಆಗಿದೆ.

ನಾಯಿಗೂ ತನ್ನ ಮನೆ ಸೇರುವ ತವಕವಿದೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗ ಭಾರೀ ವೈರಲ್ ಆಗಿದೆ. ಚೇತನ್ ಕಜೆಗದ್ದೆ ಎಂಬುವರು ತನ್ನ ಫೇಸ್‌ಬುಕ್ ಪೇಜ್ ನಲ್ಲಿ ಈ ಪೋಸ್ಟ್ ಮಾಡಿದ್ದಾರೆ.

- Advertisement -

Latest News

error: Content is protected !!