ಬೆಳ್ತಂಗಡಿ : ಕರಾವಳಿ ಕರ್ನಾಟಕದಲ್ಲಿ ನಂ.1 ಪಿಯು ಸಂಸ್ಥೆಯಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿರುವ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ಎಕ್ಸೆಲ್ ಪಿಯು ಕಾಲೇಜಿನ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜ್ ಕೋಡ್ SS0351 ರಲ್ಲಿ ಅಡ್ಮಿಶನ್ ಮಾಡಿದ್ದು, ಈ ಕಾಲೇಜು ಕೋಡ್ ನ ಮಾನ್ಯತೆಯ ಬಗ್ಗೆ ಮತ್ತು ವಿದ್ಯಾರ್ಥಿಗಳ ಯಾವ ಕಾಲೇಜು ಕೋಡ್ ನಲ್ಲಿ ಅಡ್ಮಿಶನ್ ಆಗಿದ್ದಾರೆ ಎನ್ನುವುದನ್ನು ಮಕ್ಕಳ ಸ್ಯಾಟ್ಸ್ ಸಂಖ್ಯೆ ಮೂಲಕ ಹತ್ತಿರದ ಡಿಡಿಪಿಯು ಕಚೇರಿ, ಸರಕಾರಿ ಕಾಲೇಜುಗಳಲ್ಲಿ, ವೆಬ್ ಸೈಟ್ ಗಳಲ್ಲಿ ಖಚಿತ ಪಡಿಸಿಕೊಳ್ಳಬಹುದಾಗಿದೆ.
ಜೂನ್ 10 ರಂದು ರದ್ದುಗೊಂಡಿರುವ ಕಾಲೇಜಿನ ಕೋಡ್ SS0376 ಆಗಿದ್ದು, ಕಳೆದ ವರ್ಷ ಅದರ ಮಾನ್ಯತೆಗಾಗಿ ಅರ್ಜಿಯನ್ನು ಸಲ್ಲಿಸಿದ್ದು ಮಾತ್ರ ವಿನಃ ಅದರಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ದಾಖಾಲಾತಿ ಮಾಡಿರಲಿಲ್ಲ. ಈ ವರ್ಷ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅದರ ಮಾನ್ಯತೆಯನ್ನು ರದ್ದುಗೊಳಿಸಲು ಮಾರ್ಚ್ ತಿಂಗಳ ಕೊನೆಯಲ್ಲಿ ಅರ್ಜಿಯನ್ನು ಹಾಕಿದ್ದರು.
ಆದರೆ ಈಗ ಕಾಣದ ಕೈಗಳು ಸಂಸ್ಥೆಯ ಘನತೆಯನ್ನು ಹಾಳುಮಾಡುವ ಉದ್ದೇಶದಿಂದ ಜೂ.12 ರಿಂದ ಎಕ್ಸೆಲ್ ಕಾಲೇಜಿನ ಮಾನ್ಯತೆ ರದ್ದು ಮಾಡಿದ್ದಾರೆಂದು ಸುಳ್ಳು ಸುದ್ದಿಯನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಪ್ರಯತ್ನಿಸುತ್ತಿದ್ದಾರೆ.ತಾವೆಲ್ಲರೂ ಗೊಂದಲಕ್ಕೆ ಒಳಗಾಗದೇ ಸಹಕರಿಸಬೇಕಾಗಿ ವಿನಂತಿಯನ್ನು ಎಕ್ಸೆಲ್ ಪಿಯು ಕಾಲೇಜಿನ ಆಡಳಿತ ಮಂಡಳಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.


