Sunday, June 7, 2026
Homeಕರಾವಳಿಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿದು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಪ್ರಕರಣ: ಇಬ್ಬರ ರಕ್ಷಣೆ,  ಇನ್ನಿಬ್ಬರಿಗಾಗಿ...

ಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿದು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಪ್ರಕರಣ: ಇಬ್ಬರ ರಕ್ಷಣೆ,  ಇನ್ನಿಬ್ಬರಿಗಾಗಿ ಮುಂದುವರೆದ ಶೋಧ ಕಾರ್ಯ

- Advertisement -
- Advertisement -

ಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿದು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನಿಬ್ಬರಿಗಾಗಿ ಮುಂದುವರೆದ ಶೋಧ ಕಾರ್ಯ ಮುಂದುವರೆದಿದೆ.

ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ
ಹೆನ್ರಿ ಕಾರ್ಲೊ ಎಂಬವರಿಗೆ ಸೇರಿದ ಮನೆ ಮೇಲೆ ಗುಡ್ಡ ಕುಸಿದು ಬಿದ್ದಿದೆ.  ಉತ್ತರ ಕರ್ನಾಟಕ ಮೂಲದ ಕಾರ್ಮಿಕರು ಕಾರ್ಲೋ ಅವರ ಅನೇಕ ವರ್ಷಗಳಿಂದ ಇವರ ತೋಟದ ಕೆಲಸ ಮಾಡುತ್ತಿದ್ದರು.

ಕಾರ್ಲೋ ಅವರ ಮನೆಯ ಹತ್ತಿರದಲ್ಲಿ ಪ್ರತ್ಯೇಕ ಕೊಠಡಿ ಅವರಿಗೆ ನೀಡಲಾಗಿತ್ತು. ಇಂದು ಆ ಕೊಠಡಿ ಮೇಲೆ ಗುಡ್ಡ ಜರಿದು ಬಿದ್ದಿದೆ. ಜೆಸಿಬಿ ಬಳಸಿ ಮಣ್ಣು ತೆರವು ಮಾಡಿ ಶೋಧ ಕಾರ್ಯ ನಡೆಸಲಾಗಿದೆ. ನಾಲ್ವರ ಪೈಕಿ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಉಳಿದಿಬ್ಬರ ಶೋಧ ಕಾರ್ಯ ನಡೆದಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ. ನಾಗರಾಜ್ ಮತ್ತು ಎಸ್. ಐ ಹರೀಶ್ ತಂಡ ಭೇಟಿ ನೀಡಿದೆ.

- Advertisement -

Latest News

error: Content is protected !!