Friday, April 26, 2024
Homeಕರಾವಳಿಧರ್ಮಸ್ಥಳ: ನಾಮನಿರ್ದೇಶನ ಆಗಿರುವುದರಿಂದ ಯಾವುದೇ ಉತ್ಸಾಹದ  ರಾಜಕೀಯ ಇಲ್ಲ - ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ನಾಮನಿರ್ದೇಶನ ಆಗಿರುವುದರಿಂದ ಯಾವುದೇ ಉತ್ಸಾಹದ  ರಾಜಕೀಯ ಇಲ್ಲ – ವೀರೇಂದ್ರ ಹೆಗ್ಗಡೆ

spot_img
- Advertisement -
- Advertisement -

ಧರ್ಮಸ್ಥಳ : ರಾಜ್ಯ ಸಭೆಗೆ ನಾಮನಿರ್ದೇಶನ ಮಾಡಿ ಪ್ರಧಾನಿ ನರೇಂದ್ರ ಮೋದಿ ದೇಶ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ.ನಾಮನಿರ್ದೇಶನ ಆಗಿರುವುದರಿಂದ ಯಾವುದೇ ಉತ್ಸಾಹದ  ರಾಜಕೀಯ ಇಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ನನ್ನ ಜೊತೆ ಪ್ರಖ್ಯಾತರಾದ ಇತರ ಮೂರು ಮಂದಿಯನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆಗಳನ್ನು ಮಾಡಿದವರನ್ನು ಗುರುತಿಸಿದ್ದಾರೆ. ರಾಜ್ಯ ಸಭೆ ಎಂದರೆ ಹಿರಿಯರ ವೇದಿಕೆ ಎಂದು ಲೆಕ್ಕ.   ಹಾಗಾಗಿ ದೇಶದಲ್ಲಿ ಯಾರು  ಈಗಾಗಲೇ ವಿಶೇಷವಾದ   ಸೇವೆಗಳನ್ನು ವಿವಿಧ ಕ್ಷೇತ್ರಗಳಲ್ಲಿ  ಮಾಡಿದ್ದಾರೆ ಆ ಅನುಭವವನ್ನು ಹಂಚಿಕೊಳ್ಳಬೇಕು. ಮತ್ತು ನಮ್ಮ ಸೀಮಿತ ಪ್ರದೇಶದಲ್ಲಿ ಮಾಡಿದ ಕಾರ್ಯಗಳು ಉದಾಹರಣೆಗೆ  ರಾಜ್ಯದಲ್ಲೋ, ಜಿಲ್ಲೆಯಲ್ಲೋ, ತಾಲೂಕಿನಲ್ಲೋ, ಅಥವಾ ಆ ಕ್ಷೇತ್ರದಲ್ಲಿ ಮಾಡುವಂತಹ ಕಾರ್ಯಗಳನ್ನು ಇತರ ರಾಜ್ಯಗಳಿಗೂ ವಿಸ್ತರಿಸಬೇಕು  ಎಂಬುದು ಇದರ ಮುಖ್ಯ ಉದ್ದೇಶ.ಉದಾಹರಣೆಗೆ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ವಿಸ್ತಾರವಾಗಿ ಹಮ್ಮಿಕೊಂಡಿದ್ದೇವೆ.ಈ ಕಾರ್ಯಕ್ಷೇತ್ರದ ವಿಸ್ತರಣೆ ಇಡೀ ದೇಶಕ್ಕೆ ಆಗುವಂತಹ ಅವಶ್ಯಕತೆ ಇದೆ.ಅದಲ್ಲದೆ ಇನ್ನೂ ಅನೇಕ ಕಾರ್ಯಕ್ರಮಗಳು ದೇವಸ್ಥಾನಗಳ ಜೀರ್ಣೋದ್ಧಾರ, ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ   ರಕ್ಷಣೆ ಇಂತಹ ಅನೇಕ ಕಾರ್ಯ ಕ್ರಮಗಳನ್ನು ಮಾಡುವ ಅವಕಾಶ ಇದೆ.ಇದೆಲ್ಲವನ್ನೂ ರಾಜ್ಯದಲ್ಲಿ ಮಾತ್ರವಲ್ಲ  ದೇಶದಾದ್ಯಂತ ಮಾಡುವಂತಹ ಅವಕಾಶವನ್ನು ಬಳಸಿಕೊಳ್ಳುತ್ತೇನೆ.ಈ ಅವಕಾಶ ಕೊಟ್ಟದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

- Advertisement -
spot_img

Latest News

error: Content is protected !!