Monday, June 8, 2026
Homeಕರಾವಳಿವಿಮಾನ ನಿಲ್ದಾಣ ರಸ್ತೆಯ ಮರವೂರು ಸೇತುವೆ ಬಳಿ ಕೀ, ಹೆಲ್ಮೆಟ್ ಸಹಿತ ಮೋಟಾರ್ ಬೈಕ್ ಪತ್ತೆ:...

ವಿಮಾನ ನಿಲ್ದಾಣ ರಸ್ತೆಯ ಮರವೂರು ಸೇತುವೆ ಬಳಿ ಕೀ, ಹೆಲ್ಮೆಟ್ ಸಹಿತ ಮೋಟಾರ್ ಬೈಕ್ ಪತ್ತೆ: ಆತ್ಮಹತ್ಯೆ ಶಂಕೆ

- Advertisement -
- Advertisement -
 ಮಂಗಳೂರು: ಇಲ್ಲಿನ ವಿಮಾನ ನಿಲ್ಧಾಣ ರಸ್ತೆಯ ಮರವೂರು ಸೇತುವೆ ಮೇಲೆ ಬುಧವಾರದಂದು ಬೆಳಗ್ಗೆ ಮೋಟಾರ್ ಬೈಕೊಂದು ಕೀ ಮತ್ತು ಹೆಲ್ಮೆಟ್ ಸಹಿತ ಪತೆಯಾಗಿದ್ದು, ಈ ಕುರಿತು ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಬೆಳಗ್ಗೆಯಿಂದಲೂ ಮೋಟಾರ್ ಬೈಕ್ ಕೀ ಸಹಿತ ಹೆಲ್ಮೆಟ್ ನೊಂದಿಗೆ ಸೇತುವೆ ಬಳಿಯಲ್ಲಿಯೇ ಇದ್ದು, ಸಮಯ ಕಳೆದರೂ ಯಾರೂ ಬೈಕ್ ಅನ್ನು ತೆಗೆದುಕೊಂಡು ಹೋಗಲಿಲ್ಲ. ಈಗಾಗಿ ಅನುಮಾನಗೊಂಡ ಸ್ಥಳೀಯರು ಈ ಕುರಿತು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದಾರೆ.

ಇನ್ನು ಬೈಕ್ ಸವಾರನು ಬೈಕ್ ಅನ್ನು ಸೇತುವೆ ಮೇಲೆ ಪಾರ್ಕ್ ಮಾಡಿ, ನದಿಗೆ ಜಿಗಿದು ಆತ್ಮಹತ್ಯೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ.

- Advertisement -

Latest News

error: Content is protected !!