Wednesday, June 3, 2026
Homeಕರಾವಳಿಅಕ್ಕನ ಮೇಲೆ ಮೇಲೆ ಮುನಿಸಿಕೊಂಡ ತಮ್ಮ: ಸಹೋದರನಿಗೆ 434 ಮೀಟರ್ ಉದ್ದದ ಪತ್ರ ಬರೆದ ಕೇರಳದ...

ಅಕ್ಕನ ಮೇಲೆ ಮೇಲೆ ಮುನಿಸಿಕೊಂಡ ತಮ್ಮ: ಸಹೋದರನಿಗೆ 434 ಮೀಟರ್ ಉದ್ದದ ಪತ್ರ ಬರೆದ ಕೇರಳದ ಯುವತಿ

- Advertisement -
- Advertisement -

ಕೇರಳ:  ಸಹೋದರರ ದಿನಾಚರಣೆಯಂದು ಶುಭಾಶಯ ಹೇಳದಿದ್ದಕ್ಕೆ ಮುನಿಸಿಕೊಂಡಿರುವ ತನ್ನ ತಮ್ಮನಿಗಾಗಿ ಕೇರಳದ ಮಹಿಳಾ ಎಂಜಿನಿಯರ್‌ ಕೃಷ್ಣಪ್ರಿಯಾ ಎಂಬವರು 434 ಮೀಟರ್‌ ಉದ್ದದ‌ ಕ್ಷಮಾಪಣೆ ಪತ್ರ ಬರೆದು ಸುದ್ದಿಯಾಗಿದ್ದಾರೆ.

ಸಹೋದರರ ದಿನಾಚರಣೆ ಶುಭಾಶ‌ಯ ಹೇಳದ್ದಕ್ಕೆ ಎಂಜಿನಿಯರಿಂಗ್‌ ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಅವರ ಸಹೋದರ ಕೃಷ್ಣಪ್ರಸಾದ್, ಅಕ್ಕ ಮೇಲೆ ಮುನಿಸಿಕೊಂಡು ತಮ್ಮ ಕಾಲ್ ಹಾಗೂ ವಾಟ್ಸ್‌ ಆಯಪ್‌ನಲ್ಲಿ ಬ್ಲಾಕ್‌ ಮಾಡಿದ್ದಾನೆ. ಹಾಗಾಗಿ ಪತ್ರ ಬರೆದು ತಮ್ಮನ ಕ್ಷಮೆ ಕೇಳಿದ್ದಾರೆ.

14 ರೋಲ್ ಪೇಪರ್ ಖರೀದಿಸಿ ಸುಮಾರು 12 ಗಂಟೆಗಳ ಕಾಲ ವ್ಯಯಿಸಿ ಅವರು ಪತ್ರ ಬರೆದಿದ್ದಾರೆ. ಈ ಪತ್ರ  ಬರೋಬ್ಬರಿ 5.27 ಕೆ.ಜಿ ಇದ್ದು ಅದನ್ನು ತಮ್ಮನ ಬರ್ತಡೇಗೆ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಈ ಪತ್ರ ಗಿನ್ನಿಸ್ ರೆಕಾರ್ಡ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -

Latest News

error: Content is protected !!