Friday, June 5, 2026
Homeಕರಾವಳಿಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಇಂದು ಎರಡನೇ ಬಾರಿಗೆ ಭೂ ಕಂಪನ

ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಇಂದು ಎರಡನೇ ಬಾರಿಗೆ ಭೂ ಕಂಪನ

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇಂದು ಸಂಜೆ ವೇಳೆಗೆ ಮತ್ತೆ ಎರಡನೇ ಬಾರಿಗೆ ಲಘು ಭೂ ಕಂಪನ ಸಂಭವಿಸಿದೆ.

ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ್ದು, ಗ್ರಾಮದಲ್ಲಿ ಒಂದೇ ದಿನ ಎರಡು ಬಾರಿ ಕಂಪಿಸಿದೆ.

ಹೀಗಾಗಿ ಚೆಂಬು ಗ್ರಾಮದ ಜನರು ಆತಂಕಗೊಳ್ಳುವಂತಾಗಿದೆ.

ಇಂದು ಬೆಳಗ್ಗೆ 7.45 ರ ವೇಳೆಗೆ ಚೆಂಬು ಗ್ರಾಮದಲ್ಲಿ ಭೂಮಿ ಕಂಪಿಸಿತ್ತು. ಈ ಕಂಪನದ ಕೇಂದ್ರ ಬಿಂದು ಚೆಂಬು ಗ್ರಾಮದಿಂದ 5 ಕಿಲೋ ಮೀಟರ್ ದೂರದಲ್ಲಿತ್ತು‌.

ಕಳೆದ ಶನಿವಾರ ಬೆಳಗ್ಗೆಯೂ ಚೆಂಬು ಗ್ರಾಮದಲ್ಲಿ ಭೂ ಕಂಪನ ಸಂಭವಿಸಿತ್ತು.

- Advertisement -

Latest News

error: Content is protected !!