Sunday, June 7, 2026
HomeUncategorizedಮಂಗಳೂರು: ಉ.ಕ ಸೇರಿದಂತೆ ದೇಶದಲ್ಲಿ ಒಟ್ಟು 50 ಹೊಸ ರಾಜ್ಯಗಳ ರಚನೆಗೆ ಮೋದಿ ಚಿಂತನೆ: ಸಚಿವ...

ಮಂಗಳೂರು: ಉ.ಕ ಸೇರಿದಂತೆ ದೇಶದಲ್ಲಿ ಒಟ್ಟು 50 ಹೊಸ ರಾಜ್ಯಗಳ ರಚನೆಗೆ ಮೋದಿ ಚಿಂತನೆ: ಸಚಿವ ಉಮೇಶ್ ಕತ್ತಿ ಹೇಳಿಕೆ

- Advertisement -
- Advertisement -

ಮಂಗಳೂರು:2024ರ ಸಾರ್ವತ್ರಿಕ ಚುನಾವಣೆ ಬಳಿಕ ದೇಶದಲ್ಲಿ ಹೊಸದಾಗಿ 50 ರಾಜ್ಯಗಳು ಉದಯಿಸುತ್ತವೆ. ಈ ಪೈಕಿ ಉತ್ತರ ಕರ್ನಾಟಕ ಕೂಡ ಹೊಸ ರಾಜ್ಯವಾಗಿ ಜನ್ಮ ತಳೆಯಲಿದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.ಮಂಗಳೂರಿನ ವೇಣೂರಿನಲ್ಲಿ ಮಾತನಾಡಿದ ಕತ್ತಿ, ಉತ್ತರ ಕರ್ನಾಟಕವೂ ಸೇರಿದಂತೆ ಹೊಸದಾಗಿ 50 ರಾಜ್ಯಗಳ ರಚನೆಗೆ ಖುದ್ದು ಪ್ರಧಾನಿ ಮೋದಿ ಮನಸ್ಸು ಮಾಡಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.

ಎರಡೂವರೆ ಕೋಟಿ ಇದ್ದ ಜನಸಂಖ್ಯೆ ಇದೀಗ ರಾಜ್ಯದಲ್ಲಿ ಆರೂವರೆ ಕೋಟಿ ಆಗಿದೆ.ಜನಸಂಖ್ಯೆ ಬೆಳೆದಂತೆ ರಾಜ್ಯವನ್ನು ಇಬ್ಬಾಗ ಮಾಡುವುದು ಅನಿವಾರ್ಯ ಆಗುತ್ತದೆ. ಕರ್ನಾಟಕದಲ್ಲಿ ಎರಡು, ಉತ್ತರಪ್ರದೇಶದಲ್ಲಿ ಐದು ಮತ್ತು ಮಹಾರಾಷ್ಟ್ರದಿಂದ ಮೂರು ಹೀಗೆ ಒಟ್ಟು 50 ಹೊಸ ರಾಜ್ಯಗಳು ನಿರ್ಮಾಣವಾಗಲಿವೆ ಎಂದು ಉಮೇಶ್ ಕತ್ತಿ ಹೇಳಿದರು.

.

- Advertisement -

Latest News

error: Content is protected !!