- Advertisement -
![]()
- Advertisement -
ಭೋಪಾಲ್: ಇಲ್ಲಿನ ಬೆರಾಸಿಯಾ ಎಂಬಲ್ಲಿನ ಅರ್ಚಕರೊಬ್ಬರು ವಿಚಿತ್ರವಾದ ಸಮಸ್ಯೆಯೊಂದರಿಂದ ಬಳಲುತ್ತಿದ್ದಾರೆ. ಮಹಿಳೆಯರು ಮುಟ್ಟಿದ ತಕ್ಷಣ ಅರ್ಚಕ ಮೂರ್ಛೆ ಹೋಗುವ ವಿಚಿತ್ರ ಮಾನಸಿಕ ಕಾಯಿಲೆಯಿಂದಾಗಿ ಆಸ್ಪತ್ರೆ ಸೇರಿದ್ದಾರೆ.
ಬೆರಾಸಿಯಾದ ಹನುಮಾನ್ ದೇವಸ್ಥಾನದ ಅರ್ಚಕ ಅನೇಕ ವರ್ಷಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬ್ರಹ್ಮಚರ್ಯವನ್ನು ಆಚರಿಸುವ ಭಗವಾನ್ ಹನುಮಾನ್ ಶಕ್ತಿ ನನ್ನ ಮೇಲೆ ಬರುತ್ತದೆ, ಇದೇ ಕಾರಣಕ್ಕೆ ಹೀಗೆ ಆಗುತ್ತಿದೆ ಎಂದು ಅರ್ಚಕ ಹೇಳಿದ್ದಾರೆ.
ದೇಗುಲದ ಭಕ್ತರು ಕೊನೆಗೆ ಅರ್ಚಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವೇಳೆ ವೈದ್ಯರು ಪರೀಕ್ಷಿಸಿ ಮನೋವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.
ಬಳಿಕ ಭೋಪಾಲ್ನ ಜೆಪಿ ಮಾನಸಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಮನೋವೈದ್ಯರು ಅರ್ಚಕರ ಪರೀಕ್ಷೆ ಮಾಡಿದ್ದು, ಇದೊಂದು ಮಾನಸಿಕ ಕಾಯಿಲೆ ಎಂದು ಹೇಳಿದ್ದಾರೆ. ಅರ್ಚಕರು ಕನ್ವರ್ಷನ್ ಡಿಸಾರ್ಡರ್ದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.
- Advertisement -


