Monday, June 8, 2026
Homeಕರಾವಳಿಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿಯಿಂದ ಹಿಂದೂ ದೇವರ ಅವಹೇಳನ ಆರೋಪ ವಿಚಾರ ರಾಜ್ಯ ನಾಯಕರ ಗಮನಕ್ಕೆ: ...

ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿಯಿಂದ ಹಿಂದೂ ದೇವರ ಅವಹೇಳನ ಆರೋಪ ವಿಚಾರ ರಾಜ್ಯ ನಾಯಕರ ಗಮನಕ್ಕೆ:  ಮಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಹೇಳಿಕೆ

- Advertisement -
- Advertisement -

ಮಂಗಳೂರು: ಯಾವ ಧರ್ಮದ ನಿಂದನೆ ಮಾಡಿದರೂ ಕಾಂಗ್ರೆಸ್ ಅದನ್ನು ಒಪ್ಪಲ್ಲ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ . ಖಾದರ್ ಹೇಳಿದ್ದಾರೆ.

ಕಾಂಗ್ರೆಸ್ ಐಟಿ‌ ಸೆಲ್ ಕಾರ್ಯದರ್ಶಿಯಿಂದ ಹಿಂದೂ ದೇವರ ಅವಹೇಳನ ವಿಚಾರವಾಗಿ ಮಂಗಳೂರಿನಲ್ಲಿ ಇಂದು ಪ್ರತಿಕ್ರಿಯಿಸಿದ ಖಾದರ್, ಯಾರುಲೂ ಯಾರ ಧರ್ಮದ ನಿಂದನೆಯನ್ನೂ ಮಾಡಬಾರದು ಕಾಂಗ್ರೆಸ್ ಇದನ್ನು ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಯಾರ ವೈಯಕ್ತಿಕ ನಿಂದನೆಗೂ ಕಾಂಗ್ರೆಸ್ ಅವಕಾಶ ನೀಡಲ್ಲ, ಕ್ಲಬ್ ಹೌಸ್ ನ ಚರ್ಚೆಗಿಂತ ಮಾಡುವುದಕ್ಕೆ ಬೇರೆ ಸಾಕಷ್ಟು ಕೆಲಸವಿದೆ ಎಂದು ಖಾದರ್ ತಿಳಿಸಿದ್ದಾರೆ.

ದೇವರ ಅವಹೇಳನ ಆರೋಪ ವಿಚಾರವಾಗಿ ಜಿಲ್ಲಾಧ್ಯಕ್ಷರು ನಿನ್ನೆ ಈ ಬಗ್ಗೆ ‌ಮಾಹಿತಿ‌ ಪಡೆದಿದ್ದಾರೆ, ರಾಜ್ಯ ನಾಯಕರ ಗಮನಕ್ಕೆ ತರಲಾಗಿದೆ ಎಂದು ಯು.ಟಿ. ಖಾದರ್ ಹೇಳಿದ್ದಾರೆ.

- Advertisement -

Latest News

error: Content is protected !!