Saturday, June 13, 2026
Homeಕರಾವಳಿಮಂಗಳೂರು: ಕೆಲಸಕ್ಕೆ ಹೋದ ಪತಿ ನಾಪತ್ತೆ, ಪತ್ನಿಯಿಂದ ದೂರು

ಮಂಗಳೂರು: ಕೆಲಸಕ್ಕೆ ಹೋದ ಪತಿ ನಾಪತ್ತೆ, ಪತ್ನಿಯಿಂದ ದೂರು

- Advertisement -
- Advertisement -

ಮಂಗಳೂರು : ಕೆಲಸಕ್ಕೆಂದು ಹೋದ ಪತಿ ಮನೆ ವಾಪಾಸ್ಸಾಗಿಲ್ಲ ಎಂದು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಪಾಂಡೇಶ್ವರ ಠಾಣಾ ವ್ಯಾಪ್ತಿಯ ಮುಹಮ್ಮದ್ ಅಶ್ಫಾಕ್ (42) ಎಂಬವರು ಜೂ. 14ರಿಂದ ಕಾಣೆಯಾದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂ.14ರಂದು ಬೆಳಗ್ಗೆ 9-30ಕ್ಕೆ ತೊಕ್ಕೊಟ್ಟಿನಲ್ಲಿರುವ ಫ್ಯಾಕ್ಟರಿಗೆ ಕೆಲಸಕ್ಕೆಂದು ಮನೆಯಲ್ಲಿ ತಿಳಿಸಿ ಹೋದವರು ರಾತ್ರಿಯಾದರೂ ಮರಳಿ ಬರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು. ಹಾಗಾಗಿ ಸಂಬಂಧಿ ಕರು, ಪರಿಚಿತರ ಬಳಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ಸಿಗಲಿಲ್ಲ ಎಂದು ಮುಹಮ್ಮದ್ ಅಶ್ಫಾಕ್‌ರ ಪತ್ನಿ ಅಫ್ರೀನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅವರು ಎಲ್ಲಿಗೆ ಹೋದರೂ ರಾತ್ರಿ ಮನೆಗೆ ಮರಳಿ ಬರುತ್ತಿದ್ದರು. ಹೇಳದೆ ಎಲ್ಲಿಗೂ ಹೋಗುತ್ತಿರಲಿಲ್ಲ ವ್ಯವಹಾರದ ಬಗ್ಗೆ ಹೋದಾಗ ಉಳಿದುಕೊಳ್ಳಬೇಕಾದರೆ ತನಗೆ ತಪ್ಪದೇ ಹೇಳುತ್ತಿದ್ದರು. ಅಲ್ಲದೆ ಅವರ ತಾಯಿಗೆ ದಿನಕ್ಕೆ 2-3 ಬಾರಿ ಪೋನ್ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಜೂ.13ರಂದು ಬೆಳಗ್ಗೆ ಕೊನೆಯದಾಗಿ ಅವರ ತಾಯಿಗೆ ಪೋನ್ ಮಾಡಿ, ನನ್ನ ಮೊಬೈಲ್ ಪೋನ್ ಸರಿ ಇಲ್ಲ ರಿಪೇರಿ ಮಾಡಿದ ನಂತರ ನಿಮ್ಮಲ್ಲಿ ಮಾತನಾಡುತ್ತೇನೆ ಎಂದಿದ್ದರು.

ವ್ಯವಹಾರದ ವಿಷಯದಲ್ಲಿ ಬೇಸರಗೊಂಡು ಹೋಗಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!