- Advertisement -
![]()
- Advertisement -
ಕಾರ್ಕಳ : ವಿಕಲಚೇತನ ಮಗನನ್ನು ತಂದೆಯೊಬ್ಬರು ಬಾವಿಗೆ ನೂಕಿ ಹಾಕಿ ಕೊಂದು ಬಳಿಕ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ ಕೆರ್ವಾಶೆ ಎಂಬಲ್ಲಿ ಶನಿವಾರ ನಡೆದಿದೆ.
ಮೃತರನ್ನು ಪಾಚರಬೆಟ್ಟು ನಿವಾಸಿ ಕೃಷ್ಣ ಪೂಜಾರಿ ಹಾಗೂ ಅವರ ಮಗ ದೀಪೇಶ್ (26) ಎಂದು ಗುರುತಿಸಲಾಗಿದೆ. ಕೃಷ್ಣ ಪೂಜಾರಿ ಅವರ ಪತ್ನಿ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಅವರು ಮುಂಬೈಗೆ ತೆರಳಿದ್ದರೆನ್ನಲಾಗಿದೆ. ಈ ವೇಳೆ ಮನೆಯಲ್ಲಿ ಇವರಿಬ್ಬರೇ ಇದ್ದರು ಎಂದು ತಿಳಿದುಬಂದಿದೆ.
ವಿಕಲಚೇತನ ಮಗನ ವಿಚಾರದಲ್ಲಿ ಮನನೊಂದ ಕೃಷ್ಣ ಪೂಜಾರಿ ಮನೆ ಸಮೀಪದ ಬಾವಿಗೆ ಮಗನನ್ನು ತಳ್ಳಿ ಕೊಂದು, ಬಳಿಕ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್, ಕಾರ್ಕಳ ಡಿವೈಎಸ್ಪಿವಿಜಯ ಪ್ರಸಾದ್, ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಅಜೆಕಾರು ಎಸ್ಸೈ ಶುಭಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -


