Friday, May 3, 2024
Homeಕರಾವಳಿಪುತ್ತೂರು: ಹಿಂದೂ ದೇವರುಗಳಿಗೆ ಅಪಮಾನ ಆರೋಪ: ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಶೈಲಜಾ...

ಪುತ್ತೂರು: ಹಿಂದೂ ದೇವರುಗಳಿಗೆ ಅಪಮಾನ ಆರೋಪ: ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಶೈಲಜಾ ಅಮರನಾಥ್ ನಿವಾಸದ ಮೇಲೆ ತಂಡವೊಂದರಿಂದ ದಾಳಿ

spot_img
- Advertisement -
- Advertisement -

ಪುತ್ತೂರು: ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ನಲ್ಲಿ ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿರಾಜ್ಯ ಕಾಂಗ್ರೆಸ್ʼನ ಐಟಿ ಸೆಲ್ ಕಾಯದರ್ಶಿ ಹಾಗೂ ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾಯದರ್ಶಿ ಯಾಗಿರುವ ಪುತ್ತೂರಿನ ನ್ಯಾಯವಾದಿ ಶೈಲಜಾ ಅಮರನಾಥರವರ ನಿವಾಸಕ್ಕೆ ತಂಡವೊಂದು ದಾಳಿ ನಡೆಸಿದೆ. ಇಂದು ಸಂಜೆ ದಾಳಿ ನಡೆಸಿದ ತಂಡ ಮನೆಯ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದು , ಮನೆ ಗೋಡೆಗೆ ಮಡ್ ಆಯಿಲ್ ಬಳಿದಿರುವ ಬಳಿದಿದೆ..

ಪುತ್ತೂರಿನ ಬಪ್ಪಳಿಗೆಯಲ್ಲಿರುವ ಮನೆಯಂಗಳಕ್ಕೆ ಬಂದ ಕೆಲ ಯುವಕರಿದ್ದ ತಂಡವೊಂದು ಮನೆಯ ಕಿಟಕಿಗೆ ಅಳವಡಿಸಿದ ಗಾಜುಗಳನ್ನು ಒಡೆದು, ಮನೆಯ ಸಿಟೌಟ್ ಗೆ ಮಡ್ ಆಯಿಲ್ ಸುರಿದು ತೆರಳಿದ್ದು ಈ ಬಗ್ಗೆ ಶೈಲಾಜರವರು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದಕ್ಕೂ ಮೊದಲು ಹಿಂದುತ್ವ ಸಂಘಟನೆಗಳು ಶೈಲಾಜರವರ ವಿರುದ್ದ ಹಿಂದೂ ದೇವರುಗಳ ಅವಹೇಳನ ನಡೆಸಿದ್ದ ಬಗ್ಗೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು.

ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ನಲ್ಲಿ ಹಿಂದೂ ಧರ್ಮದ ಆರಾಧ್ಯ ದೇವರುಗಳಾದ ಶ್ರೀರಾಮಚಂದ್ರ, ಸೀತಾ ಮಾತೆ ಮತ್ತು ಹನುಮಂತ ದೇವರ ಕುರಿತು ಕೆಟ್ಟ ಪದಗಳನ್ನು ಬಳಸಿ ಅವರು ಅವಹೇಳನ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಜೂ.15 ರಂದು ಬುಧವಾರ ರಾತ್ರಿ 9ಗಂಟೆಗೆ ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ನಲ್ಲಿ `ಸಂಡೇ ಅಂಕಲ್ಸ್ ಆರ್ ಮಂಡೇ ನಸ್ಸ್’ಎಂಬ ಕಾರ್ಯಕ್ರಮವನ್ನು ತಂಡವೊಂದು ನಡೆಸಿದ್ದು ಅದರಲ್ಲಿ ಶೈಲಜಾ ಅಮರನಾಥ್, ಪ್ರೀತು ಶೆಟ್ಟಿ ಯಾನೆ ಮಹಾಲಕ್ಷ್ಮೀ, ಕಾಂಗ್ರೆಸ್ ಐಟಿ ಸೆಲ್ನ ಅನಿಲ್, ಪ್ರವೀಣ್, ಪುನೀತ್ ಮುಂತಾದವರು ಭಾಗವಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವೇಳೆ ಹಿಂದೂ ದೇವರು ದೇವತೆಗಳ ಮೇಲೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಬೇರೆ ಬೇರೆ ಜಾತಿ, ಧರ್ಮಗಳ ಬಗ್ಗೆ ದ್ವೇಷವನ್ನು ಪ್ರಚೋದಿಸುವ ಹಾಗೂ ಸಾಮಾಜಿಕ ಶಾಂತಿ ಭಂಗ ತರುವ ದುರುದ್ದೇಶದಿಂದ ಮಾತನಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯ ಮಾಡಿದ್ದಾರೆ ಎಂದು ಹಿಂದೂ ಜಾಗರಣೆ ವೇದಿಕೆ ಹಾಗೂ ಬಜರಂಗದಳ ಪುತ್ತೂರು ಘಟಕದವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಶೈಲಾಜ ಅಮರನಾಥ್ ಹಾಗೂ ಮತ್ತಿತ್ತರರು ಕ್ಲಬ್ ಹೌಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ವೈರಲ್ ಆಗುತ್ತಿದೆ.

- Advertisement -
spot_img

Latest News

error: Content is protected !!