Thursday, May 2, 2024
Homeಕರಾವಳಿಉಡುಪಿಉಡುಪಿ: ಒಂದು ಕಡೆ ಕ್ಯಾನ್ಸರ್ ಪೀಡಿತ ತಾಯಿ,ಮತ್ತೊಂದೆಡೆ ಆರ್ಥಿಕ ಸಂಕಷ್ಟ: ಸವಾಲುಗಳ ಮಧ್ಯೆಯೇ ಪಿಯುಸಿಯಲ್ಲಿ ಅತ್ಯದ್ಭುತ...

ಉಡುಪಿ: ಒಂದು ಕಡೆ ಕ್ಯಾನ್ಸರ್ ಪೀಡಿತ ತಾಯಿ,ಮತ್ತೊಂದೆಡೆ ಆರ್ಥಿಕ ಸಂಕಷ್ಟ: ಸವಾಲುಗಳ ಮಧ್ಯೆಯೇ ಪಿಯುಸಿಯಲ್ಲಿ ಅತ್ಯದ್ಭುತ ಸಾಧನೆ ಮಾಡಿದ ವಿದ್ಯಾರ್ಥಿ

spot_img
- Advertisement -
- Advertisement -

ಉಡುಪಿ: ಕ್ಯಾನ್ಸರ್ ಪೀಡಿತೆ ತಾಯಿಯ ತೀವ್ರ ಅನಾರೋಗ್ಯದ ಮಧ್ಯೆಯೂ ವಿದ್ಯಾರ್ಥಿಯೊಬ್ಬ ಈ ಬಾರಿಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ.

ಉಡುಪಿಯ ಎಂಜಿಎಂ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ಶೆಣೈ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ 584 (ಶೇ.97.33) ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕಾರ್ತಿಕ್ ಅವರ ತಾಯಿ ಕಳೆದ ಒಂದೂವರೆ ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗಾಗಿ ಇಡೀ ಕುಟುಂಬ ಲಕ್ಷಾಂತರ ರೂ. ಹಣ ವ್ಯಯಿಸಿದೆ.

ಹೀಗೆ ಕ್ಯಾನ್ಸರ್ ಪೀಡಿತ ತಾಯಿಯ ನೋವು ಒಂದೆಡೆಯಾದರೆ, ಹಣಕಾಸಿನ ತೀವ್ರ ತೊಂದರೆ ನಡುವೆಯೂ ಕಾರ್ತಿಕ್ ಓದಿನ ಬಗ್ಗೆ ಹೆಚ್ಚಿನ ಗಮನ ನೀಡಿ, ಉತ್ತಮ ಅಂಕ ಪಡೆದಿರುವುದು ಗಮನಾರ್ಹ.

- Advertisement -
spot_img

Latest News

error: Content is protected !!