Saturday, June 6, 2026
Homeಕರಾವಳಿಉಡುಪಿಯಶಪಾಲ್ ಸುವರ್ಣಗೆ ಬೆದರಿಕೆ ಆರೋಪಿಗಳ ಬಂಧನವಾಗದ ಹಿನ್ನೆಲೆ: ಮೀನುಗಾರ ಸಮುದಾಯದ ಮಹಿಳೆಯರಿಂದ ಪ್ರತಿಭಟನೆ ಎಚ್ಚರಿಕೆ

ಯಶಪಾಲ್ ಸುವರ್ಣಗೆ ಬೆದರಿಕೆ ಆರೋಪಿಗಳ ಬಂಧನವಾಗದ ಹಿನ್ನೆಲೆ: ಮೀನುಗಾರ ಸಮುದಾಯದ ಮಹಿಳೆಯರಿಂದ ಪ್ರತಿಭಟನೆ ಎಚ್ಚರಿಕೆ

- Advertisement -
- Advertisement -

ಉಡುಪಿ: ಬಿಜೆಪಿ ಮುಖಂಡ ಯಶಪಾಲ್‌‌ ಸುವರ್ಣ ಮೇಲೆ‌ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಪೋಸ್ಟ್ ಹಿನ್ನಲೆಯಲ್ಲಿ ಆರೋಪಿಗಳ ಬಂಧನವಾಗದ ಕಾರಣಕ್ಕೆ ಮೀನುಗಾರ ಸಮುದಾಯದ ಮಹಿಳೆಯರಿಂದ
ಪ್ರತಿಭಟನೆ ಎಚ್ಚರಿಕೆ ನೀಡಲ್ಪಟ್ಟಿದೆ.

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರ ಸಹಕಾರಿ ಸಂಘದ ಮಹಿಳೆಯರು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷರೂ ಆಗಿರುವ ಯಶಪಾಲ್ ಸುವರ್ಣ ಬೆಂಬಲಕ್ಕೆ ಮಹಿಳೆಯರು ನಿಂತಿದ್ದು, ಹಿಂದೂ ಯುವಸೇನೆ, ಬಿಜೆಪಿ ಕಾರ್ಯಕರ್ತರ ಮನವಿ ಬಳಿಕ ಇದೀಗ ಸಹಕಾರಿ ಸಂಘದ ಮಹಿಳೆಯರಿಂದ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಲ್ಪಟ್ಟಿದೆ.

ಆರೋಪಿಗಳನ್ನು ಶೀಘ್ರವಾಗಿ ಬಂಧಿಸದಿದ್ದಲ್ಲಿ ಮೂರು ಜಿಲ್ಲೆಯ ಸಹಕಾರಿ ಸಂಘದ ಮಹಿಳೆಯರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!