Saturday, June 6, 2026
Homeಕರಾವಳಿಸುಳ್ಯದಲ್ಲಿ ಯುವಕನ ಮೇಲೆ ಗುಂಡಿನ ದಾಳಿ ಪ್ರಕರಣ : ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

ಸುಳ್ಯದಲ್ಲಿ ಯುವಕನ ಮೇಲೆ ಗುಂಡಿನ ದಾಳಿ ಪ್ರಕರಣ : ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಸುಳ್ಯ: ಭಾನುವಾರ ಸುಳ್ಯದ ಮೊಗರ್ಪಣೆ ಸೇತುವೆ ಬಳಿ ಸುಳ್ಯದ ಜಯನಗರದ ಮಹಮ್ಮದ್‌ ಶಾಹಿ ಎಂಬವರ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಶಂಕಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಸಂಪಾಜೆಯ ಬಾಲಚಂದ್ರ ಕಳಗಿಯವರ ಕೊಲೆ ಆರೋಪಿಗಳಲ್ಲಿ ಕೆಲವರು ಸೇರಿ ಶಾಹಿ  ಅವರನ್ನು ಕೊಲೆಗೈಯಲು ಯತ್ನಿಸಿದ್ದಾರೆ ಎನ್ನಲಾಗಿದೆ.ಅಂದ್ಹಾಗೆ ಕಳಗಿ ಅವರ ಕೊಲೆ ಪ್ರಕರಣದ ಕೆಲವು ಆರೋಪಿಗಳು ಹಾಗೂ ಶಾಹಿ ಸ್ನೇಹಿತರಾಗಿದ್ದು, ಇತ್ತೀಚೆಗೆ ಇವರ ಮಧ್ಯೆ ಭಿನ್ನಾಬಿಪ್ರಾಯ ಬಂದಿದ್ದು, ಇದೇ ಕಾರಣಕ್ಕೆ ಕೊಲೆ ಯತ್ನ ನಡೆದಿದೆ ಎಂದು ಶಂಕಿಸಲಾಗಿದೆ.

ಭಾನುವಾರ ಶಾಹಿ ಮೊಗರ್ಪಣೆ ಸೇತುವೆ ಬಳಿ ಇರುವ ತನ್ನ ತಂಗಿ ಮನೆಗೆ ಹೋಗಿ ವಾಪಾಸ್ ಕಾರು ಹತ್ತಿದ್ದ ಸಂದರ್ಭದಲ್ಲಿ ಅಪರಿಚಿತರ ತಂಡ ಸ್ಕಾರ್ಫಿಯೋದಲ್ಲಿ ಬಂದು ಗುಂಡು ಹೊಡೆದಿದ್ದರು. ಅದು ಕಾರಿಗೆ ತಾಗಿ ಯುವಕ ಅಪಾಯದಿಂದ ಪಾರಾಗಿದ್ದರು.

- Advertisement -

Latest News

error: Content is protected !!