Saturday, June 6, 2026
Homeಕರಾವಳಿಮಂಗಳೂರು ವಿವಿ ಘಟಕ ಕಾಲೇಜಿನ ತರಗತಿಯಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ವಿವಾದ

ಮಂಗಳೂರು ವಿವಿ ಘಟಕ ಕಾಲೇಜಿನ ತರಗತಿಯಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ವಿವಾದ

- Advertisement -
- Advertisement -

ಮಂಗಳೂರು: ಕಾಲೇಜು ತರಗತಿಯಲ್ಲೇ ಸಾವರ್ಕರ್ ಫೋಟೋ ಅಳವಡಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ವಿವಿ ಘಟಕ‌ ಕಾಲೇಜಿನ ತರಗತಿಯಲ್ಲಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರವನ್ನು ಅಳವಡಿಕೆ ಮಾಡಲಾಗಿದೆ.‌

ಫೋಟೋ ಅಳವಡಿಕೆ ಬಗ್ಗೆ ಕಾಲೇಜಿನ ಇತರ ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದ ಬಳಿಕ ತೆರವು ಮಾಡಲಾಗಿದೆ.

ಸಾವರ್ಕರ್ ಫೋಟೋ ಅಳವಡಿಕೆ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಕಾಲೇಜಿನ ಕಾಮರ್ಸ್ ವಿಭಾಗದ ಕೆಲವು ವಿದ್ಯಾರ್ಥಿಗಳಿಂದ ವಿವಾದ ಸೃಷ್ಟಿಸಲ್ಪಟ್ಟಿದ್ದು, ಸದ್ಯ ವಿದ್ಯಾರ್ಥಿಗಳ ಬಳಿ ಪ್ರಾಂಶುಪಾಲರು ತಪ್ಪೊಪ್ಪಿಗೆ ಬರೆಸಿಕೊಂಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!