Friday, June 5, 2026
Homeತಾಜಾ ಸುದ್ದಿಬೋರ್‌ವೆಲ್‌ಗೆ ಬಿದ್ದಿದ್ದ ಮಗುವನ್ನು ರಕ್ಷಿಸಿದ ಭಾರತೀಯ ಯೋಧರು

ಬೋರ್‌ವೆಲ್‌ಗೆ ಬಿದ್ದಿದ್ದ ಮಗುವನ್ನು ರಕ್ಷಿಸಿದ ಭಾರತೀಯ ಯೋಧರು

- Advertisement -
- Advertisement -

ಗುಜರಾತ್: ಕೊಳವೆ ಬಾವಿಯಲ್ಲಿ ಬಿದ್ದ 2 ವರ್ಷದ ಬಾಲಕನನ್ನು ರಕ್ಷಣೆ ಮಾಡುವಲ್ಲಿ ಭಾರತೀಯ ಸೇನೆ ಯೋಧರು ಯಶಸ್ವಿಯಾಗಿದ್ದಾರೆ.


ಗುಜರಾತ್‌ನ ಸುರೇಂದ್ರ ನಗರ ಜಿಲ್ಲೆಯ ದುದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡೂವರೆ ವರ್ಷದ ಮಗು ಬೋರ್‌ನೆಲ್‌ನಲ್ಲಿ ಬಿದ್ದಿದ್ದು, ಬರೋಬ್ಬರಿ ಮೂರೂವರೆ ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ.


ಹೊಲದಲ್ಲಿ ಆಟವಾಡ್ತಿದ್ದಮಗು ಶಿವಂ 300 ಅಡಿ ಆಳದ ಬೋರ್‌ವೆಲ್ ನೊಳಗೆ ಬಿದ್ದಿದ್ದಾನೆ.ಬಳಿಕ ಕಾರ್ಯಾಚರಣೆ ನಡೆಸಿರುವ ಯೋಧರು 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಮಗುವಿನ ರಕ್ಷಣೆ ಮಾಡಿದ್ದಾರೆ.ಸದ್ಯ ಮಗುವನ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

- Advertisement -

Latest News

error: Content is protected !!