Wednesday, June 24, 2026
Homeತಾಜಾ ಸುದ್ದಿಕಳುವಾದ 30 ಇಟ್ಟಿಗೆ ವಾಪಸ್ ಕೊಡಿಸುವಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ದೂರು!

ಕಳುವಾದ 30 ಇಟ್ಟಿಗೆ ವಾಪಸ್ ಕೊಡಿಸುವಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ದೂರು!

- Advertisement -
- Advertisement -

ಬೆಂಗಳೂರು: ಕಳ್ಳತನವಾಗಿರುವ ಇಟ್ಟಿಗೆಯನ್ನು ವಾಪಸ್ ಕೊಡಿಸುವಂತೆ ಗೃಹ ಸಚಿವರಿಗೆ ದೂರು ಸಲ್ಲಿಸಲ್ಪಟ್ಟಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ತಿಪ್ಪೂರು ಗ್ರಾಮದ ವೆಂಕಟೇಗೌಡ ಎಂಬವರಿಂದ ದೂರು ದಾಖಲಿಸಲ್ಪಟ್ಟಿದೆ.

30 ಸಿಮೆಂಟ್ ಇಟ್ಟಿಗೆ ಕಳ್ಳತನವಾಗಿರುವ ಬಗ್ಗೆ ಬೆಂಗಳೂರಿನಿಂದ ವಿಕಾಸಸೌಧದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ವೆಂಕಟೇಗೌಡ ದೂರು ನೀಡಿದ್ದಾರೆ.

ತಮ್ಮ ಮನೆಯ ಆವರಣದಿಂದ ಪಕ್ಕದ ಮನೆಯ ವ್ಯಕ್ತಿ ಇಟ್ಟಿಗೆ ಕದ್ದಿದ್ದಾರೆ ಎಂದು ದೊಡ್ಡವೆಳವಂಗಲ ಪೊಲೀಸ್ ಠಾಣೆಗೆ ವೆಂಕಟೇಗೌಡ ದೂರು‌ ನೀಡಿದ್ದರು.‌

ಆದರೆ ಪೊಲೀಸರು ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಇಟ್ಟಿಗೆ ವಾಪಸ್ ಕೊಡಿಸುವಂತೆ ಗೃಹ ಸಚಿವರಿಗೆ ದೂರು ಕೊಟ್ಟಿದ್ದಾರೆ.

ದೂರು ಸ್ವೀಕರಿಸಿ ಬೆಂಗಳೂರು ಗ್ರಾಮಾಂತರ ಎಸ್ಪಿ ಬಳಿ ತೆರಳುವಂತೆ ಗೃಹ ಸಚಿವರ ಕಚೇರಿಯಿಂದ ದೂರುದಾರ ವೆಂಕಟೇಗೌಡ ಅವರಿಗೆ ಸೂಚಿಸಲಾಗಿದೆ.

- Advertisement -

Latest News

error: Content is protected !!