Thursday, June 4, 2026
Homeತಾಜಾ ಸುದ್ದಿಶಿವಮೊಗ್ಗ: ಫ್ರಿಡ್ಜ್‌ನಲ್ಲಿ ಈರುಳ್ಳಿ ಮಧ್ಯೆ ಅಡಗಿದ್ದ ಆಭರಣ ಹಾವು; ಬೆಚ್ಚಿಬಿದ್ದ ಮನೆಮಂದಿ

ಶಿವಮೊಗ್ಗ: ಫ್ರಿಡ್ಜ್‌ನಲ್ಲಿ ಈರುಳ್ಳಿ ಮಧ್ಯೆ ಅಡಗಿದ್ದ ಆಭರಣ ಹಾವು; ಬೆಚ್ಚಿಬಿದ್ದ ಮನೆಮಂದಿ

- Advertisement -
- Advertisement -

ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ನಗರದ ಮೂರನೇ ಕ್ರಾಸ್‌ನ ನಿವಾಸಿ ಶಂಕರ ಅಜ್ಜಂಪುರ ಅವರ ಮನೆಯಲ್ಲಿ ಬುಧವಾರ ಬೆಳಿಗ್ಗೆ ಫ್ರಿಡ್ಜ್ ಕೆಳಭಾಗದ ಟ್ರೇನಲ್ಲಿದ್ದ ಈರುಳ್ಳಿಯ ನಡುವೆ ಆಶ್ರಯ ಪಡೆದಿದ್ದ ಆಭರಣ ಹಾವು ಕಂಡು ಕೆಲಕಾಲ ಮನೆಯವರು ಹೌಹಾರಿದ್ದರು.


ಮನೆಯವರು ತರಕಾರಿ ತೆಗೆದುಕೊಳ್ಳಲು ಫ್ರಿಡ್ಜ್ ಬಾಗಿಲು ತೆರೆದಾಗ ಅಲ್ಲಿ ಹಾವು ವಿರಾಜಮಾನವಾಗಿತ್ತು. ಆತಂಕಗೊಂಡ ಅವರು ಹಾವು ಹಿಡಿಯುವಂತೆ ಸ್ನೇಕ್ ಕಿರಣ್ ಅವರ ಮೊರೆ ಹೋದರು.

ಮಾಹಿತಿ ತಿಳಿದು ಮನೆಗೆ ಬಂದ ಸ್ನೇಕ್ ಕಿರಣ್ ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದರು. ಮನೆಯವರು ನಿಟ್ಟುಸಿರುವ ಬಿಟ್ಟರು.

- Advertisement -

Latest News

error: Content is protected !!