Saturday, May 18, 2024
Homeಅಪರಾಧನಡೆದು ಹೋಗುತ್ತಿದ್ದವನನ್ನು ಕಲ್ಲಿನಿಂದ ಹೊಡೆದು ಕೊಂದ ದುಷ್ಕರ್ಮಿಗಳು

ನಡೆದು ಹೋಗುತ್ತಿದ್ದವನನ್ನು ಕಲ್ಲಿನಿಂದ ಹೊಡೆದು ಕೊಂದ ದುಷ್ಕರ್ಮಿಗಳು

spot_img
- Advertisement -
- Advertisement -

ಬೆಳಗಾವಿ: ರಸ್ತೆ ಬದಿ ನಡೆದು ಹೋಗುತ್ತಿದ್ದವನನ್ನು ಕಲ್ಲಿನಿಂದ ಹೊಡೆದು ಹತ್ಯೆಗೈದಿರುವ ಘಟನೆ ಇಂದು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.


ಹುಕ್ಕೇರಿಯ ದುಂಡಯ್ಯಾನಂದಿಕೊಳ್ಳಮಠ (50) ಕೊಲೆಯಾದ ವ್ಯಕ್ತಿ. ಇಂದು ಬೆಳ್ಳಂಬೆಳಿಗ್ಗೆ ಈ ಕೊಲೆ ನಡೆದಿದ್ದು, ನಡೆದು ಹೋಗುತ್ತಿದ್ದವನನ್ನು ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ ಎನ್ನಲಾಗಿದೆ.
ಕೊಣ್ಣೂರ ಉಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಪಿಎಸ್ ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುವುದು ತಿಳಿದು ಬಂದಿಲ್ಲ.

- Advertisement -
spot_img

Latest News

error: Content is protected !!