Saturday, June 6, 2026
Homeಕರಾವಳಿಮಂಗಳೂರು: ಎಸ್​​ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದವರಿಂದ ಪೊಲೀಸರನ್ನು ನಿಂದಿಸಿ ಹಲ್ಲೆ ನಡೆಸಲು ಯತ್ನ ಪ್ರಕರಣ : ಮತ್ತೆ...

ಮಂಗಳೂರು: ಎಸ್​​ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದವರಿಂದ ಪೊಲೀಸರನ್ನು ನಿಂದಿಸಿ ಹಲ್ಲೆ ನಡೆಸಲು ಯತ್ನ ಪ್ರಕರಣ : ಮತ್ತೆ 6 ಮಂದಿ ಆರೋಪಿಗಳ ಬಂಧನ 

- Advertisement -
- Advertisement -

ಮಂಗಳೂರು: ಎಸ್​​ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದಾಗ ಪೊಲೀಸರನ್ನು ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ನಿನ್ನೆ ಘೋಷಣೆ ಕೂಗಿದ ಇಬ್ಬರು, ಅವರಿಗೆ ಆಶ್ರಯ ನೀಡಿದ ನಾಲ್ವರು ಸೇರಿ ಒಟ್ಟು 9 ಮಂದಿ‌ ಅರೆಸ್ಟ್ ಆಗಿತ್ತು. ಇದರ ಬೆನ್ನಲ್ಲೇ‌ ಮತ್ತೆ ಆರು ಮಂದಿಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಗುರುಪುರದ ಸಫ್ವಾನ್ ಯಾನೆ ಫಹಾದ್ (26), ಅಬ್ದುಲ್ ಸಲಾಂ (23), ಸೂರಲ್ಪಾಡಿಯ ಮೊಹಮ್ಮದ್ ಹುನೈಜ್ (23), ಗುರುಪುರದ ಮೊಹಮ್ಮದ್ ಸಾಹಿಲ್ (23), ಮೊಹಮ್ಮದ್ ಫಲಾಹ್ (20), ಇನೋಳಿಯ ಅಬ್ದುಲ್ ಲತೀಫ್ (31) ಬಂಧಿತರು. ಬಂಧಿತರಿಂದ ಒಂದು ಕಾರು ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!