Thursday, June 4, 2026
Homeಕರಾವಳಿಗುಂಡ್ಯದಲ್ಲಿ ಮಿತಿ ಮೀರಿದ ಒಂಟಿ ಸಲಗದ ಹಾವಳಿ: ಕಬ್ಬು ಜ್ಯೂಸ್ ಅಂಗಡಿಯ ಹಿಂಭಾಗದಲ್ಲಿದ್ದ ಕಬ್ಬನ್ನು ತಿಂದು...

ಗುಂಡ್ಯದಲ್ಲಿ ಮಿತಿ ಮೀರಿದ ಒಂಟಿ ಸಲಗದ ಹಾವಳಿ: ಕಬ್ಬು ಜ್ಯೂಸ್ ಅಂಗಡಿಯ ಹಿಂಭಾಗದಲ್ಲಿದ್ದ ಕಬ್ಬನ್ನು ತಿಂದು ಖಾಲಿ ಮಾಡಿದ ಗಜರಾಜ

- Advertisement -
- Advertisement -

ಗುಂಡ್ಯ :  ದೃಶ್ಯ ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗವೊಂದು ವಾಹನ ಸವಾರರಿಗೆ ಆಗಾಗ್ಗೆ ತೊಂದರೆ ಕೊಡುತ್ತಲೇ ಇರುವ ಬಗ್ಗೆ ಸುದ್ದಿಯಾಗುತ್ತಲೇ ಇದೆ. ಇದೀಗ ಇದೇ ಒಂಟಿ ಸಲಗ ಕಿತಾಪತಿಯೊಂದನ್ನು ಮಾಡಿದೆ.

ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮಣಿಭಾಂಡ ಎಂಬಲ್ಲಿ ರಸ್ತೆ ಬದಿಯ ಕಬ್ಬು ಜ್ಯೂಸ್  ಅಂಗಡಿಯೊಂದರ ಹಿಂಭಾಗದಲ್ಲಿ ಇಡಲಾಗಿದ್ದ ಕಬ್ಬನ್ನು ಕಾಡಾನೆಯೊಂದು ತಿನ್ನುತ್ತಿರುವ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಕೊಂಬಾರು ನಿವಾಸಿಯೋರ್ವರು ಸುಬ್ರಹ್ಮಣ್ಯದಲ್ಲಿ ಕರ್ತವ್ಯ ನಿರ್ವಹಿಸಿ ಶನಿವಾರ ರಾತ್ರಿ 10.30ರ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮಣಿಭಾಂಡ ಎಂಬಲ್ಲಿ ಜ್ಯೂಸ್ ಅಂಗಡಿಯ ಪಕ್ಕದಲ್ಲಿ ಕಾಡಾನೆಯೊಂದು ಕಬ್ಬು ತಿನ್ನುತ್ತಿರುವುದು ಕಂಡುಬಂದಿದ್ದು, ಕೂಡಲೇ ತನ್ನ ಮೊಬೈಲ್ ಮೂಲಕ ವೀಡಿಯೋ ಮಾಡಿದ್ದಾರೆ.

- Advertisement -

Latest News

error: Content is protected !!