Tuesday, May 14, 2024
Homeತಾಜಾ ಸುದ್ದಿಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಸನ್ನಿಹಿತ: ಜೂನ್ 1 ರಂದು ಶ್ರೀರಾಮ ಮಂದಿರದ ಗರ್ಭಗುಡಿ...

ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಸನ್ನಿಹಿತ: ಜೂನ್ 1 ರಂದು ಶ್ರೀರಾಮ ಮಂದಿರದ ಗರ್ಭಗುಡಿ ನಿರ್ಮಾಣಕ್ಕೆ ಅಡಿಗಲ್ಲು: ಯೋಗಿ ಆದಿತ್ಯನಾಥ್ ರಿಂದ ವಿದ್ಯುಕ್ತ ಚಾಲನೆ

spot_img
- Advertisement -
- Advertisement -

ಉತ್ತರ ಪ್ರದೇಶ: ಹಿಂದೂಗಳ ಬಹು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗುತ್ತಿದೆ. ಅಯೋಧ್ಯೆಯ ಶ್ರೀರಾಮ ಮಂದಿರದ ಸ್ಥಾಪನೆ ಕಾರ್ಯ ಸಾಕಾರಗೊಳ್ಳಲಿದೆ. ಹೌದು ಜೂನ್ 1ರಂದು ಶ್ರೀರಾಮ ಮಂದಿರದ ಗರ್ಭಗುಡಿ ನಿರ್ಮಾಣ ಕಾರ್ಯಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್  ಅವರು ಗರ್ಭಗುಡಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಮಾಡಿದ ಸುಮಾರು ಎರಡು ವರ್ಷಗಳ ನಂತರ, ಗರ್ಭಗೃಹ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತಿದೆ. ಈ ಅಪರೂಪದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

ಜೂನ್ 1ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಅಯೋಧ್ಯೆಯ ಶ್ರೀರಾಮ ದೇವಾಲಯದ ‘ಗರ್ಭ ಗೃಹ’ದಲ್ಲಿ ಮೊದಲ ಕೆತ್ತನೆಯ ಕಲ್ಲನ್ನು ಇರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಉನ್ನತ ಕಾರ್ಯ ನಿರ್ವಾಹಕರೊಬ್ಬರು ಹೇಳಿದ್ದಾರೆ. ರಾಮ ಲಲ್ಲಾ ಮತ್ತು ಅವರ ಮೂವರು ಸಹೋದರರ ವಿಗ್ರಹಗಳನ್ನು ಇರಿಸುವ ಮೂಲಕ ‘ಗರ್ಭ ಗೃಹ’ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ.

ಶ್ರೀರಾಮ ಮಂದಿರದ ಅಡಿಪಾಯ ಮತ್ತು ಸ್ತಂಭ ರಚನೆಯ ಅತ್ಯಂತ ಕಡಿಮೆ ಕಾಲಮ್‌ನಲ್ಲಿ ಭಾರವಾದ ಬೇಸ್ ನಿರ್ಮಾಣದ ಕೆಲಸ ಪೂರ್ಣಗೊಂಡಿದೆ. ಈಗ ಗರ್ಭ ಗೃಹದ ಸರದಿ, ”ಕಾರ್ಯಕರ್ತರು, ‘ಸರ್ವಾರ್ಥ ಸಿದ್ಧಿ’ಅಥವಾ ಕಾರ್ಯದ ಸಂಪೂರ್ಣ ಸಾಧನೆಗಾಗಿ ಜೂನ್ 1 ಮಂಗಳಕರವಾಗಿದ್ದು ಅಂದೇ ಅಧಿಕೃತ ಚಾಲನೆ ನೀಡಲು ಟ್ರಸ್ಟ್ ನಿರ್ಧರಿಸಿದೆ. ಒಟ್ಟು 11 ಮಂದಿ ಅರ್ಚಕರು ಬೆಳಗ್ಗೆ 9 ಗಂಟೆ ಸುಮಾರಿಗೆ ಪೂಜೆ ನೆರವೇರಿಸಲಿದ್ದು, 11 ಗಂಟೆಯವರೆಗೆ ನಡೆಯಲಿದೆ. ಅಂದು ವಿವಿಧ ಧಾರ್ಮಿಕ ಕಾರ್ಯಗಳೂ ಸಹ ನಡೆಯಲಿವೆ.

- Advertisement -
spot_img

Latest News

error: Content is protected !!