Sunday, June 7, 2026
Homeಕರಾವಳಿಉಳ್ಳಾಲ: ಸಮುದ್ರದಲ್ಲಿ ಮುಳುಗಿ ಮಹಿಳೆ ಸಾವು

ಉಳ್ಳಾಲ: ಸಮುದ್ರದಲ್ಲಿ ಮುಳುಗಿ ಮಹಿಳೆ ಸಾವು

- Advertisement -
- Advertisement -

ಉಳ್ಳಾಲ:  ವಿಹಾರಕ್ಕೆ ಬಂದಿದ್ದ ಮೈಸೂರು ಮೂಲದ ಮಹಿಳೆಯೊಬ್ಬರು ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಉಳ್ಳಾಲದ ಸಮುದ್ರ ತೀರದಲ್ಲಿ ನಡೆದಿದೆ.

ಮೈಸೂರು ನಿವಾಸಿ ಭಾಗ್ಯಲಕ್ಷ್ಮೀ (45) ಮೃತರು. ಭಾಗ್ಯಲಕ್ಷ್ಮೀ ದಂಪತಿ, ಅವರ ಮೂವರು ಪುತ್ರಿಯರು ಹಾಗೂ ಮೊಮ್ಮಗಳು ಮೈಸೂರಿನಿಂದ ಮಂಗಳೂರಿಗೆ ವಿಹಾರಕ್ಕೆಂದು ಬಂದಿದ್ದರು . ಪಂಪ್‌ವೆಲ್‌ ಬಳಿ ರೂಮಿನಲ್ಲಿ ತಂಗಿದ್ದ ಕುಟುಂಬ ಮೇ 28ರಂದು ಬೆಳಗ್ಗೆ ಸೋಮೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದರು.

ಅಲ್ಲಿಂದ ಉಳ್ಳಾಲದ ಸಮುದ್ರವಿಹಾರಕ್ಕೆಂದು ತೆರಳಿದ್ದ ಕುಟುಂಬದ ಪೈಕಿ ಭಾಗ್ಯಲಕ್ಷ್ಮೀ ಅವರು ಸಮುದ್ರದ ಅಲೆಯೊಂದಕ್ಕೆ ಸಿಲುಕಿ ಸಮುದ್ರಪಾಲಾಗಿದ್ದಾರೆ. ತಕ್ಷಣ ಕುಟುಂಬಸ್ಥರು ಕಿರುಚಲು ಆರಂಭಿಸಿದಾಗ, ಸಮೀಪದಲ್ಲಿ ಇದ್ದ ಶಿವಾಜಿ ಜೀವರಕ್ಷಕ ದಳದ ಸದಸ್ಯರು ದೌಡಾಯಿಸಿ ಮಹಿಳೆಯನ್ನು ಮೇಲಕ್ಕೆತ್ತಿದರು. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!