- Advertisement -
![]()
- Advertisement -
ಬಂಟ್ವಾಳ; ನಿನ್ನೆ ರಾತ್ರಿ ಮಾಣಿ ಸಮೀಪದ ನೇರಳಕಟ್ಟೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ, ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಕಬಕ ಸಮೀಪದ ಅರ್ಕ ನಿವಾಸಿ ಸೇಸಪ್ಪ ನಾಯ್ಕ್ ಎಂಬವರ ಪುತ್ರ ಕಿಶೋರ್(28) ಮೃತ ದುರ್ದೈವಿ.
ಕಿಶೋರ್ ಬೈಕಿನಲ್ಲಿ ತನ್ನ ಸ್ನೇಹಿತನನ್ನು ಕಬಕದಿಂದ ಕಲ್ಲಡ್ಕಕ್ಕೆ ಬಿಟ್ಟು ವಾಪಾಸ್ಸು ಬರುವ ವೇಳೆ ಕಾರು ಢಿಕ್ಕಿ ಹೊಡೆದು ಕಿಶೋರ್ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿ ಆಗದೆ ಕಿಶೋರ್ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
- Advertisement -


