Thursday, June 4, 2026
Homeತಾಜಾ ಸುದ್ದಿನಾಯಿ, ಬೆಕ್ಕಿನ ಜೊತೆಗೆ ಒಂಟಿಯಾಗಿ ಸಾಯಿ ಎಂದು ಸಮಂತಾಗೆ ಶಾಪ: ಇದಕ್ಕೆ ನಟಿಯ ಉತ್ತರ ಹೇಗಿದೆ...

ನಾಯಿ, ಬೆಕ್ಕಿನ ಜೊತೆಗೆ ಒಂಟಿಯಾಗಿ ಸಾಯಿ ಎಂದು ಸಮಂತಾಗೆ ಶಾಪ: ಇದಕ್ಕೆ ನಟಿಯ ಉತ್ತರ ಹೇಗಿದೆ ಗೊತ್ತಾ?

- Advertisement -
- Advertisement -

ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಸಮಂತಾ ಅವರು ಇತ್ತೀಚೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡಿದ ನಂತರದಲ್ಲಿ ಮುದ್ದಿನ ನಾಯಿ ಮರಿ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಫೋಟೋ ನೋಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಆದರೆ ಒಬ್ಬರು ಮಾತ್ರ ಟ್ವಿಟ್ಟರ್‌ನಲ್ಲಿ “ನಾಯಿ, ಬೆಕ್ಕಿನ ಜೊತೆಗೆ ಒಂಟಿಯಾಗಿ ಸಾಯಿ” ಎಂದು ಶಪಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ರೀತಿ ಶಾಪ ಹಾಕಿದ್ದನ್ನು ಗಮನಿಸಿದ ಸಮಂತಾ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ನನ್ನನ್ನು ಅದೃಷ್ಟವಂತೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ ಅವರು. ಟ್ವಿಟ್ಟರ್‌ನಲ್ಲಿ ಈ ರೀತಿ ಕಾಮೆಂಟ್ ಹಾಕಿದವನನ್ನು ಸಮಂತಾ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಆ ಟ್ವೀಟ್ ಮಾಡಿದವರು ಅವರ ಕಮೆಂಟ್ ಡಿಲಿಟ್ ಮಾಡಿದ್ದಾರೆ. ಆದರೆ ಆ ಟ್ವೀಟ್‌ ಸ್ಕ್ರೀನ್‌ಶಾಟ್‌ ಎಲ್ಲೆಡೆ ವೈರಲ್ ಆಗುತ್ತಿದೆ.

ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಸಮಂತಾ ಮಾತನಾಡಿ, “ನನ್ನನ್ನು ಜನರು ಪ್ರೀತಿಸೋದು, ದ್ವೇಷಿಸೋದು ನನಗೆ ಆಶ್ಚರ್ಯವನ್ನುಂಟು ಮಾಡೋದಿಲ್ಲ. ಆದರೆ ಇದನ್ನು ಸ್ವೀಕಾರ ಮಾಡೋದು ಸುಲಭ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ನಿಂದನೆ ಮಾಡೋದನ್ನು ಸರಳವಾಗಿ ತೆಗೆದುಕೊಳ್ಳುವುದು ಕಷ್ಟವೇ. ಅದು ಸುಲಭವಲ್ಲ. ಈ ರೀತಿ ವಿಷಯಗಳು ವ್ಯಕ್ತಿಗೆ ಮಾನಸಿಕ ಪರಿಣಾಮ ಬೀರುತ್ತವೆ. ಹೀಗಾಗಿ ಇದೆಲ್ಲ ಸಣ್ಣ ವಿಷಯ ಅಂತ ನಾನು ಅಂದುಕೊಳ್ಳೋದಿಲ್ಲ. ಇಷ್ಟು ವರ್ಷಗಳಿಂದ ಅನುಭವಿಸುತ್ತಿರುವುದರಿಂದ ನಾನು ಇದನ್ನು ನಿಭಾಯಿಸಬಲ್ಲೆ” ಎಂದು ಹೇಳಿದ್ದಾರೆ.

ಪತಿ ನಾಗಚೈತನ್ಯ ಅವರಿಂದ ದೂರಾದ ಮೇಲೆ ಸಮಂತಾ ಅವರು ಸಿನಿಮಾಗಳ ಕಡೆ ಹೆಚ್ಚು ಮುಖ ಮಾಡಿದರು. ವಿಭಿನ್ನವಾದ ಪ್ರಯೋಗಗಳನ್ನು ಮಾಡುತ್ತಿರುವ ಸಮಂತಾ, ಬಾಲಿವುಡ್‌ನತ್ತವೂ ಹೆಜ್ಜೆ ಹಾಕುವಂತೆ ಕಾಣುತ್ತಿದೆ. ಇತ್ತೀಚೆಗೆ ಕಾಶ್ಮೀರದಲ್ಲಿ ವಿಜಯ್ ದೇವರಕೊಂಡ ಜೊತೆಗೆ ‘ಖುಷಿ’ ಸಿನಿಮಾ ಶೂಟಿಂಗ್‌ನಲ್ಲಿ ಸಮಂತಾ ಭಾಗಿಯಾಗಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

- Advertisement -

Latest News

error: Content is protected !!