Friday, June 5, 2026
HomeUncategorizedಮಾಟಕ್ಕೆ ಒಳಗಾದ ಮಹಿಳೆಯರಿಗೆ ಪೂಜಾರಿಯಿಂದ ಚಾಟಿ ಏಟು

ಮಾಟಕ್ಕೆ ಒಳಗಾದ ಮಹಿಳೆಯರಿಗೆ ಪೂಜಾರಿಯಿಂದ ಚಾಟಿ ಏಟು

- Advertisement -
- Advertisement -

ಚೆನ್ನೈ: ಮಾಟ ಮಂತ್ರಕ್ಕೆ ಒಳಗಾಗಿದ್ದಾರೆಂದು ಶಂಕಿಸಲಾದ ಮಹಿಳೆಯರಿಗೆ ಪೂಜಾರಿಯೊಬ್ಬರು ಚಾಟಿಯಿಂದ ಹೊಡೆಯುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆಯು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ರಾಸಿಪುರಂ ಬಳಿಯ ನರೈಕಿನಾರ್ ಗ್ರಾಮದಲ್ಲಿ ನಡೆಸಲಾದ ಧಾರ್ಮಿಕ ಆಚರಣೆಯಲ್ಲಿ, ಪೂಜಾರಿ ಕಾಟೇರಿ (ಕೆಟ್ಟದ್ದನ್ನು ದೂರವಿಡಲು ಗ್ರಾಮಸ್ಥರು ಪ್ರಾರ್ಥಿಸುವ ದೇವತೆಯ ರೂಪ) ವೇಷಭೂಷಣವನ್ನು ಧರಿಸಿ ಹಲವಾರು ಮಹಿಳೆಯರಿಗೆ ಚಾಟಿಯಿಂದ ಹೊಡೆದಿದ್ದಾನೆ.

20 ವರ್ಷಗಳ ನಂತರ ಈ ಆಚರಣೆಯು ನಡೆಯುತ್ತಿದ್ದು, ಮಾಟ ಮಂತ್ರಕ್ಕೆ ಒಳಗಾದ ಮಹಿಳೆಯರನ್ನು ಪೂಜಾರಿ ಹೊಡೆದರೆ ಮಾಟಕ್ಕೆ ಒಳಗಾದವರು ಕೆಟ್ಟ ಶಕ್ತಿಯಿಂದ ಹೊರಬರುತ್ತಾರೆ ಎಂಬುವುದು ಇವರ ನಂಬಿಕೆ.

ಸಾಮಾಜಿಕ ಜಾಲತಾಣದಲ್ಲಿ ವೈರಲಾದ ವೀಡಿಯೋದಲ್ಲಿ ಕಪ್ಪು ವಸ್ತ್ರವನ್ನು ಧರಿಸಿರುವ ಪೂಜಾರಿ ಚಾಟಿಯನ್ನು ಹಿಡಿದು ಮಾಟ ಮಂತ್ರಕ್ಕೆ ಒಳಗಾಗಿರುವ ಮಹಿಳೆಯರಿಗೆ ಹೊಡೆಯುವುದನ್ನು ಕಾಣಬಹುದಾಗಿದೆ. ಪೂಜಾರಿ ಮಹಿಳೆಯರಿಗೆ ಹೊಡೆಯಲು ಹೊರಟಾಗ ಅದನ್ನು ನೋಡುತ್ತಿರುವ ಸ್ಥಳೀಯ ಜನರು ಉತ್ಸಾಹದಿಂದ ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ. ಜನಸಮೂಹವು ತಮಿಳು ಭಾಷೆಯಲ್ಲಿ ಪೋಡು.. ಪೋಡು.. (ಥಳಿಸು.. ಥಳಿಸು..) ಎಂದು ಕೂಗುತ್ತಿರುತ್ತಾರೆ. ನಂತರ ಪೂಜಾರಿ ತನ್ನ ಚಾಟಿ ಎತ್ತಲು ಪ್ರಾರಂಭಿಸುತ್ತಾರೆ. ಈ ವೇಳೆ ಮಹಿಳೆ ಗೌರವದಿಂದ ತನ್ನ ಎರಡು ಕೈಗಳನ್ನು ಮಡಚಿ ನಮಸ್ಕರಿಸುತ್ತಾರೆ. ಮಡಚಿದ ಕೈಗಳನ್ನು ಮೇಲಕ್ಕೆತ್ತಿದ ನಂತರ ಪೂಜಾರಿ ಅವರನ್ನು ಚಾಟಿಯಿಂದ ಹೊಡೆಯಲು ಮುಂದಾಗುತ್ತಾರೆ. ಈ ಒಂದು ವಿಚಿತ್ರ ಆಚರಣೆಯನ್ನು ನೋಡಲು ಅಕ್ಕಪಕ್ಕದ 18 ಗ್ರಾಮಗಳ ಜನರು ಪಾಲ್ಗೊಂಡಿದ್ದರು. 20 ವರ್ಷಗಳ ನಂತರ ನಡೆದ ಕಾರಣ ಈ ಆಚರಣೆಯನ್ನು ಕಣ್ಣುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು. ಎರಡು ಗುಂಪುಗಳ ನಡುವಿನ ಘರ್ಷಣೆಯಿಂದ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಈ ಆಚರಣೆ ನಡೆದಿರಲಿಲ್ಲ ಎಂದು ತಿಳಿದು ಬಂದಿದೆ.

ನಾಮಕ್ಕಲ್ ಜಿಲ್ಲೆಯ ವರದರಾಜಪೆರುಮಾಳ್ ಚೆಲ್ಲಿಯಮ್ಮನ್ ಮಾರಿಯಮ್ಮನ್ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ದೇವಸ್ಥಾನದ ಉತ್ಸವಗಳು ಒಂದು ತಿಂಗಳ ಕಾಲ ನಡೆಯುತ್ತವೆ. ಇದು ಏಪ್ರಿಲ್ 29 ರಂದು ಪ್ರಾರಂಭವಾಗಿದ್ದು, ಮೇ 30 ರಂದು ಕೊನೆಗೊಳ್ಳಲಿದೆ.

- Advertisement -

Latest News

error: Content is protected !!